ಪರಿಶಿಷ್ಟ ಜಾತಿಗಳ ದತ್ತಾಂಶ ಸಂಗ್ರಹದ ಅವಧಿ ವಿಸ್ತರಣೆ; ಇದುವರೆಗೂ ಶೇ.73  ರಷ್ಟು ಪ್ರಗತಿ; ನಿಖರ ಮಾಹಿತಿ ಒದಗಿಸಲು ಮನವಿ

Most read

ಬೆಂಗಳೂರು: ಶಾಸಕರುಗಳು, ಹಲವು ಸಂಘ ಸಂಸ್ಥೆಗಳು ಪರಿಶಿಷ್ಟ ಜಾತಿಗಳ ದತ್ತಾಂಶ ಸಂಗ್ರಹದ ಸಮೀಕ್ಷಾ ಅವಧಿಯನ್ನು ವಿಸ್ತರಿಸಲಾಗಿದೆ. ಶಾಸಕರು ಮತ್ತು ಅನೇಕ ಸಂಘಸಂಸ್ಥೆಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಒಳ ಮೀಸಲಾತಿ ಅನುಷ್ಠಾನಕ್ಕಾಗಿ ರಚಿಸಲಾಗಿರುವ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್ನ್.‌ ನಾಗಮೋಹನ್‌ ದಾಸ್‌ ಅವರ ಅಧ್ಯಕ್ಷತೆಯ ಏಕ ಸದಸ್ಯ ಆಯೋಗ ಈ ಮಾಹಿತಿ ನೀಡಿದೆ.

ಮನೆ-ಮನೆ ಭೇಟಿ ನೀಡಿ ಸಮೀಕ್ಷೆ  ದಿನಾಂಕವನ್ನು ಮೇ. 25 ರವರೆಗೆ ವಿಸ್ತರಿಸಲಾಗಿದೆ. ವಿಶೇಷ ಶಿಬಿರದ (ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ) ಅವಧಿಯನ್ನು ಮೇ 26 ರಿಂದ 28 ರವರೆಗೆ ಮರು ನಿಗದಿಪಡಿಸಲಾಗಿದೆ. ಆನ್‌ ಲೈನ್‌ ಮೂಲಕ ಸ್ವಯಂಘೋಷಣಾ ಅವಧಿಯನ್ನು ಮೇ 19 ರಿಂದ 25 ರವರಗೆ ವಿಸ್ತರಿಸಲಾಗಿದೆ. ಪರಿಶಿಷ್ಟ ಜಾತಿ ಒಳಮೀಸಲಾತಿಯ ಏಕಸದಸ್ಯ ಆಯೋಗದ ಅಧ್ಯಕ್ಷ ಡಾ.H.N. ನಾಗಮೋಹನ್ ದಾಸ್ ಸುದ್ದಿಗೋಷ್ಠಿಯಲ್ಲಿ ವಿವರ ಒದಗಿಸಿದ್ದಾರೆ.

ಮೇ 15ರ ವರೆಗೆ  ಮನೆ ಮನೆ ಸಮೀಕ್ಷೆಯಲ್ಲಿ ಶೇಕಡ. 73.72 ರಷ್ಟು ಪ್ರಗತಿ ಸಾಧಿಸಲಾಗಿದೆ. ರಾಜ್ಯದ 31 ಜಿಲ್ಲೆಗಳಲ್ಲಿ ಸಮೀಕ್ಷೆ ಮಾಡಲಾಗಿರುವ ಎಸ್‌ ಸಿ ಕುಟುಂಬಗಳ ಸಂಖ್ಯೆ; 1841258; ಭೇಟಿ ಮಾಡಲಾಗಿರುವ Non-SC ಕುಟುಂಬಗಳ ಸಂಖ್ಯೆ: 9706233.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷೆ ಮಾಡಲಾಗಿರುವ ಎಸ್‌ ಸಿ ಕುಟುಂಬಗಳ ಸಂಖ್ಯೆ 55027; ಭೇಟಿ ಮಾಡಲಾಗಿರುವ Non-SC ಕುಟುಂಬಗಳ ಸಂಖ್ಯೆ: 1326323.

ರಾಜ್ಯದ 31 ಜಿಲ್ಲೆ ಮತ್ತು ಬಿಬಿಎಂಪಿ ಸೇರಿ ಸಮೀಕ್ಷೆ ಮಾಡಲಾಗಿರುವ ಎಸ್‌ ಸಿ ಕುಟುಂಬಗಳ ಸಂಖ್ಯೆ; 1896285; ಭೇಟಿ ಮಾಡಲಾಗಿರುವ Non-SC ಕುಟುಂಬಗಳ ಸಂಖ್ಯೆ: 11032556

ವಿಸ್ತರಿಸಲಾದ ಅವಧಿಯಲ್ಲಿ ಪರಿಶಿಷ್ಟ ಜಾತಿಯ ನಾಗರೀಕರೆಲ್ಲರೂ ಜಾತಿ ಸಮೀಕ್ಷೆಯಲ್ಲಿ ತಪ್ಪದೇ ಭಾಗವಹಿಸಿ ತಮ್ಮ ಜಾತಿಯ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಬೇಕು ಎಂದು ಆಯೊಗ ಮತ್ತೊಮ್ಮೆ ಮನವಿ ಮಾಡಿಕೊಂಡಿದೆ.

ಆರಂಭಿಕ ತಾಂತ್ರಿಕ ತೊಂದರೆಗಳನ್ನು ಹೊರತುಪಡಿಸಿ ಸಮೀಕ್ಷೆಯು ಸುಗಮವಾಗಿ ನಡೆಯುತ್ತಿದೆ. 2011 ರ ಜನಗಣತಿ ಪ್ರಕಾರ ರಾಜ್ಯದಲ್ಲಿ 2140304 ಪರಿಶಿಷ್ಟ ಜಾತಿ ಕುಟುಂಬಗಳಿದ್ದು, 2025 ರ ವೇಳೆಗೆ ಸುಮಾರು 2568365 ಪರಿಶಿಷ್ಟ ಜಾತಿ ಕುಟುಂಬಗಳು ಇರಬಹುದೆಂದು ಅಂದಾಜು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಾರಂಭಿಕ ಹಂತದ ಸಮೀಕ್ಷೆಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ) ವ್ಯಾಪ್ತಿಯಲ್ಲಿ ಪ್ರಗತಿಯು ಕುಂಠಿತವಾಗಿತ್ತು. ಈ ಬಗ್ಗೆ  ಬಿ.ಬಿ.ಎಂ.ಪಿ ಯ ಮುಖ್ಯ ಆಯುಕ್ತರು ಹಾಗೂ ವಲಯ ಆಯುಕ್ತರುಗಳೊಂದಿಗೆ ಈ ತಿಂಗಳ 12 ರಂದು ಸಭೆ ನಡೆಸಲಾಗಿದೆ. ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರ ಕೊರತೆಯಿರುವುದನ್ನು ಗಮನಿಸಿ, ಸಮರ್ಪಕವಾಗಿ ಸಮೀಕ್ಷೆಯನ್ನು ಕೈಗೊಳ್ಳಲು ಸಮರ್ಥರಿರುವ ಪದವಿ ಹೊಂದಿದ ಆಶಾ ಕಾರ್ಯಕರ್ತೆಯರನ್ನು ಅಥವಾ ಅಂಗನವಾಡಿ ಕಾರ್ಯಕರ್ತರನ್ನು ಗಣತಿದಾರರನ್ನಾಗಿ ನೇಮಕ ಮಾಡಿಕೊಳ್ಳಲು ಸೂಚಿಸಲಾಗಿರುತ್ತದೆ ಮತ್ತು 2ನೇ ಹಂತದ ತರಬೇತಿಯನ್ನು ಕೂಡ ನೀಡಲಾಗಿರುತ್ತದೆ. ಪ್ರಸ್ತುತ ಸಮೀಕ್ಷೆ ತ್ವರಿತಗತಿಯಲ್ಲಿ ಸಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸಮೀಕ್ಷೆಯಲ್ಲಿ ಎಲ್ಲಾ ಪರಿಶಿಷ್ಟ ಜಾತಿಯ ಸಮುದಾಯದವರು ಭಾಗವಹಿಸಿ ತಮ್ಮ ಜಾತಿಯ ಬಗ್ಗೆ, ನಿಖರವಾದ ಮಾಹಿತಿಯನ್ನು ನೀಡಲು ಅರಿವು ಮೂಡಿಸುವ ಸಲುವಾಗಿ ಜಾಹೀರಾತುಗಳನ್ನು ನೀಡಲಾಗಿರುತ್ತದೆ. ಸಮೀಕ್ಷೆ ಕುರಿತು ಸಿದ್ಧಪಡಿಸಿದ ವಿಡಿಯೋ ತುಣುಕುಗಳನ್ನು ಪ್ರಸಾರ ಮಾಡಲಾಗುತ್ತಿದೆ. ಬಸ್ ನಿ ಹಾಗೂ ರೈಲು ಲ್ದಾಣಗಳಲ್ಲೂ ಜಾಹೀರಾತುಗಳನ್ನು ನೀಡಲಾಗಿದೆ. ಸಮೀಕ್ಷೆ ಕುರಿತು ಸಿದ್ಧಪಡಿಸಿದ ವಿಡಿಯೋ ತುಣುಕುಗಳನ್ನು ಪ್ರಸಾರ ಮಾಡಲಾಗುತ್ತಿದೆ. ಬಸ್ ನಿಲ್ದಾಣಗಳಲ್ಲಿ ಹಾಗೂ ರೈಲು ನಿಲ್ದಾಣಗಳಲ್ಲಿ ಪ್ರದರ್ಶನ ಫಲಕಗಳ ಮೂಲಕ ಸಮೀಕ್ಷೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಡಿಜಿಟಲ್ ಆಡ್, ರೇಡಿಯೋ ಜಿಂಗಲ್ ಗಳ ಮೂಲಕ ರಾಜ್ಯದಲ್ಲಿನ ಎಲ್ಲಾ ಆಕಾಶವಾಣಿ ಹಾಗೂ ಖಾಸಗಿ ಎಫ್.ಎಂ. ವಾಹಿನಿಗಳಲ್ಲಿಯೂ ಕೂಡ ಪ್ರಚಾರ ನೀಡಲಾಗುತ್ತಿದೆ ಎಂದರು.

ಇದಲ್ಲದೆ ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್ (ಎಕ್ಸ್), ಫೇಸ್ ಬುಕ್, ವಾಟ್ಸ್ ಆಪ್, ಟೆಲಿಗ್ರಾಮ್, ನ್‌ ಸ್ಟಾ ಗ್ರಾಮ್ ಇತ್ಯಾದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕೈಗೊಳ್ಳಲಾಗಿದೆ ಹಾಗೂ ವಿಶೇಷವಾಗಿ ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಳ್ಳಲು ಪ್ರತ್ಯೇಕವಾಗಿ ಅನುದಾನ ಒದಗಿಸಲಾಗಿದ್ದು, ಪರಿಶಿಷ್ಟ ಜಾತಿ ಸಮುದಾಯದವರು ಹೆಚ್ಚಾಗಿ ವಾಸವಿರುವ ಸ್ಥಳಗಳಲ್ಲಿ 2 ಟ್ಯಾಬ್ಲೊಗಳ ಮೂಲಕ ಸಮೀಕ್ಷೆಯ ಬಗ್ಗೆ, ಜಾಗೃತಿಯನ್ನು ಮೂಡಿಸಲಾಗುತ್ತಿದೆ.

ಸಮೀಕ್ಷೆ ವೇಳೆ ಉದ್ಭವಿಸುವ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ನೀಡಲು ರಾಜ್ಯ ಮಟ್ಟದ ಸಹಾಯವಾಣಿ ಸಂಖ್ಯೆ: 9481359000 ಅನ್ನು ಸ್ಥಾಪಿಸಲಾಗಿದೆ. ಸಹಾಯವಾಣಿಯಲ್ಲಿ ಒಟ್ಟು 15 ಲೈನ್ ಗಳನ್ನು ಅಳವಡಿಸಲಾಗಿರುತ್ತದೆ.

More articles

Latest article