ಟ್ರಂಪ್‌ ಗೆ ಸಾಧ್ಯವಾಗಿದ್ದು ಮೋದಿಗೆ ಏಕೆ ಸಾಧ್ಯವಿಲ್ಲ?; ಅಸಾದುದ್ದೀನ್ ಓವೈಸಿ ಪ್ರಶ್ನೆ

Most read

ನವದೆಹಲಿ: ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿದು ತರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಾಧ್ಯವಾಗುವುದಾದರೆ, 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್ ನನ್ನು ಪಾಕಿಸ್ತಾನದಿಂದ ಸೆರೆಹಿಡಿದು ತರುವುದು ಪ್ರಧಾನಿ ನೇಂದ್ರ ಮೋದಿ ಅವರಿಗೆ ಅಸಾಧ್ಯವೇ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅವರ ದೇಶದಿಂದಲೇ ಅಪಹರಿಸಿಕೊಂಡು ತಮ್ಮ ದೇಶಕ್ಕೆ ಕರೆತಂದಿದ್ದಾರೆ.  ಹಾಗಾದರೆ ಅಜರ್‌ ನನ್ನು ಭಾರತಕ್ಕೆ ಸೆರೆ ಹಿಡಿದು ಕರೆತರಲು ಪ್ರಧಾನಿ ಮೋದಿ ಅವರಿಗೆ ಏಕೆ ಸಾಧ್ಯವಾಗುವುದಿಲ್ಲ?.

ಭಯೋತ್ಪಾದನೆಯ ವಿರುದ್ಧ ಕೇವಲ ಹೇಳಿಕೆಗಳನ್ನು ನೀಡುವುದು ದೊಡ್ಡ ವಿಷಯ ಅಲ್ಲ. ಸೂಕ್ತ, ಸಮಗ್ರ ಕ್ರಮ ಅಗತ್ಯ. ನಿಜವಾಗಿಯೂ ಪ್ರಧಾನಿ ಮೋದಿ ಅವರಿಗೆ 56 ಇಂಚಿನ ಎದೆಗಾರಿಕೆ ಇದ್ದರೆ, ಮಸೂದ್ ಅಜರ್ ಮತ್ತು ಲಷ್ಕರ್-ಎ-ತೈಬಾದಂತಹ ಭಯೋತ್ಪಾದಕ ಸಂಘಟನೆಗಳ ಮುಖಂಡರನ್ನು ಭಾರತಕ್ಕೆ ಕರೆತರಬೇಕು ಎಂದು ಓವೈಸಿ ಆಗ್ರಹಪಡಿಸಿದ್ದಾರೆ.

More articles

Latest article