ಮಟನ್ ಕೈಮಾ ಒಂದಿದ್ದರೆ ಇಡ್ಲಿ, ದೋಸಾ, ಚಪಾತಿಗೆಲ್ಲಾ ಹೇಳಿ ಮಾಡಿಸಿದ ಊಟ

Most read

ಒಮ್ಮೊಮ್ಮೆ ನಾನ್ ವೆಜ್ ನಲ್ಲಿ ಸಾಂಬಾರ್, ಗ್ರೇವಿ ಮಾಡಿ ಮಾಡಿ ಮಾಡಿ ಬೇಸರ ಆಗಿರುತ್ತೆ. ಅದರಲ್ಲೂ ಇಡ್ಲಿಗೋ, ದೋಸೆಗೋ, ಪೂರಿಗೋ ನಾನ್ ವೆಜ್ ನಲ್ಲಿ ಏನಾದರೂ ತಿನ್ನಬೇಕು ಎನಿಸಿದರೆ ಈ ಮಟನ್ ಕೈಮಾ ಮಾಡಿ ತಿಂದು ನೋಡಿ, ಆಹಾ ಅದ್ಭುತ ಅನ್ನದೇ ನೀವಿರಲಾರಿರಿ. ಹಾಗಾದ್ರೆ ಮನೆಯಲ್ಲಿಯೇ ಮಟನ್ ಕೈಮಾ ಮಾಡುವುದು ಹೇಗೆ..? ಸುಲಭವಾಗಿ ಇಲ್ಲಿದೆ ನೋಡಿ.

ಬೇಕಾಗುವ ಪದಾರ್ಥಗಳು:
ಅರ್ಧ ಕೆಜಿ ಮಟನ್
ಈರುಳ್ಳಿ
ಹಸಿಮೆಣಸಿನಕಾಯಿ
ಬೆಳ್ಳುಳ್ಳಿ
ಶುಂಠಿ
ಅರಿಶಿನ
ಮಸಾಲೆ ಪದಾರ್ಥ
ಎಣ್ಣೆ
ಉಪ್ಪು

ಮಾಡುವ ವಿಧಾನ: ಅರ್ಧ ಕೆಜಿ ಮಟನ್ ಮಿಕ್ಸಿಗೆ ಹಾಕಿ ಕೈಮಾ ಮಾಡಿಟ್ಟುಕೊಳ್ಳಿ. ಅದಕ್ಕೆ ಮಸಾಲೆ ರೆಡಿ ಮಾಡಿಕೊಳ್ಳಿ. ಏಳು ಹಸಿಮೆಣಸಿನಕಾಯಿ, ಒಂದಿಡಿ ಈರುಳ್ಳಿ, ಹತ್ತು ಎಸಳು ಬೆಳ್ಳುಳ್ಳಿ, ಸ್ವಲ್ಪ ಶುಂಠಿ, ನಾಲ್ಕು ಲವಂಗ, ನಾಲ್ಕು ಚಕ್ಕೆ, ಒಂದು ಕೈಹಿಡಿ ತೆಂಗಿನ ತುರಿ, ಎರಡು ಸ್ಪೂನ್ ಧನ್ಯ, ಹುರಿಗಡಲೆ ಸ್ವಲ್ಪ, ಒಂದು ಸ್ಪೂನ್ ಕಾಳು ಮೆಣಸು ಈ ಎಲ್ಲವನ್ನು ಬಾಂಡಲಿಗೆ ಎಣ್ಣೆ ಹಾಕಿ ಒಂದೊಂದೆ ಚೆನ್ನಾಗಿ ಉರಿದುಕೊಳ್ಳಿ. ಅದಕ್ಕೆ ಸ್ವಲ್ಪ ಮೆಂತ್ಯ ಸೊಪ್ಪು, ಅರ್ಧ ಇಡಿ ಸಬ್ಬಕ್ಕಿ ಸೊಪ್ಪು, ಸ್ವಲ್ಪ ಪುದೀನ, ಶುಂಠಿ, ಬೆಳ್ಳುಳ್ಳಿ, ಕಾಯಿ ತುರಿ ಕೊನೆಯಲ್ಲಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಸ್ವಲ್ಪ ಅರಿಶಿನ, ಚೂರು ಉಪ್ಪು, ಕಾಲು ಕಟ್ ಕೊತ್ತಂಬರಿ ಸೊಪ್ಪು ಎಲ್ಲವನ್ನು ನುಣ್ಣಗೆ ರುಬ್ಬಿ.

ಈಗ ಮತ್ತೆ ಒಂದು ಸ್ಪೂನ್ ಹುರಿಗಡಲೆ, ಅರ್ಧ ಸ್ಪೂನ್ ಧನ್ಯ, ಅರ್ಧ ಸ್ಪೂನ್ ಪೆಪ್ಪರ್, ಎರಡು ಗುಂಟೂರು ಮೆಣಸಿನಕಾಯಿ, ಸ್ವಲ್ಪ ಉಪ್ಪು, ಸ್ವಲ್ಪ ಅರಿಶಿನ ಹಾಕಿ ಪೌಡರ್ ಮಾಡಿಕೊಳ್ಳಿ. ಈ ಪೌಡರ್ ಅನ್ನು ಕೈಮಾಗೆ ಹಾಕಿ ಜೊತೆಗೆ ರುಬ್ಬಿಕೊಂಡ ಮಸಾಲೆಯಲ್ಲಿಯೂ ಮೂರು ಸ್ಪೂನ್ ಹಾಕಿ. ಸ್ವಲ್ಪ ಸಬ್ಬಕ್ಕಿಸೊಪ್ಪು ಹಾಕಿ ಮಿಕ್ಸ್ ಮಾಡಿ. ಹದವಾಗಿ ಕಲಸಿ ಮತ್ತೆ ಮಿಕ್ಸಿಯಲ್ಲಿ ಒಂದೇ ಒಂದು ರೌಂಡ್ ರುಬ್ಬಿಕೊಳ್ಳಿ.

ಒಂದು ಬಾಂಡಲಿಗೆ ಎಣ್ಣೆ ಹಾಕಿ ಬಿಸಿ‌ಮಾಡಿ ಅದಕ್ಕೆ ಸ್ವಲ್ಪ ಮೆಂತ್ಯ ಸೊಪ್ಪು, ಸಬ್ಬಕ್ಕಿ ಸೊಪ್ಪು, ಈರುಳ್ಳಿ ಫ್ರೈ ಮಾಡಿಕೊಳ್ಳಿ ಉಳಿದ ಮಸಾಲೆಯನ್ನು ಇದರ ಜೊತೆಗೆ ಹಾಕಿ. ನೀರನ್ನು ಹಾಕಿ. ಇನ್ನು ಸ್ವಲ್ಪ ಅರಿಶಿನ ಹಾಕಿ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕುದಿಯುವುದಕ್ಕೆ ಬಿಡಿ. ಕೈಮಾ ಉಂಡೆಯನ್ನು ಕಟ್ಟಿಕೊಂಡು, ಕುದಿಯುತ್ತಿರುವ ಮಸಾಲೆಯನ್ನು ಸ್ಟೌವ್ ಆಫ್ ಮಾಡಿ ಕೈಮಾ ಬಿಟ್ಟು(ಸ್ಟವ್ ಆನ್ ನಲ್ಲೇ ಇದ್ದರೆ ಹೊಡೆಯುತ್ತೆ) ಸ್ಟೌವ್ ಆನ್ ಮಾಡಿ, ಕುದಿಸಿ ಕೈಮಾ ಉಂಡೆ ರೆಡಿ.

More articles

Latest article