2028ರಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಹಣ 4,000 ರೂ.ಗೆ ಹೆಚ್ಚಳ: ಕುಣಿಗಲ್‌ ಶಾಸಕ ರಂಗನಾಥ್‌

Most read

ಬೆಂಗಳೂರು: 2028ರಲ್ಲಿ ನಮ್ಮ ಸರ್ಕಾರ ಬಂದರೆ 2000 ರೂ. ಇರುವ ಗೃಹಲಕ್ಷ್ಮಿ ಹಣವನ್ನು 4,000 ರೂ.ಗೆ ಏರಿಸುತ್ತೇವೆ ಎಂದು ಕಾಂಗ್ರೆಸ್‌ ಶಾಸಕ ಡಾ. ರಂಗನಾಥ್ ಹೇಳಿದ್ದಾರೆ. ವಿಧಾನಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಕುಣಿಗಲ್‌ ಶಾಸಕರೂ ಆದ ಅವರು ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪದಗ್ರಹಣ ಮಾಡಿದ ದಿನವೇ ನಾನು ಹೇಗಾದರೂ ಬಡವರಿಗೆ ಸಹಾಯ ಮಾಡಬೇಕು ಎಂದು ಹೇಳಿದ್ದರು. ಗೃಹಲಕ್ಷ್ಮಿಯು ವಿಶೇಷವಾದ ಹಣಕಾಸು ಯೋಜನೆಯಾಗಿದೆ ಎಂದರು.

ಇಂದು ಬಹಳಷ್ಟು ಜನರು ಗ್ಯಾರಂಟಿ ಯೋಜನೆಗಳನ್ನು ಕುರಿತು ಟೀಕೆ ಮಾಡುತ್ತಾರೆ. 2000 ರೂ.ಗಳಲ್ಲಿ ಏನಾಗುತ್ತದೆ ಎಂದು ಪ್ರಶ್ನಿಸುತ್ತಾರೆ. 2,000 ರೂ.ಗಳಲ್ಲಿ ಏನು ಬದಲಾಗುತ್ತದೆ ಎನ್ನುವುದನ್ನು ನೋಡಲು ಗ್ರಾಮೀಣ ಪ್ರದೇಶಗಳಿಗೆ ಹೋಗಬೇಕು. ಈ ಬದಲಾವಣೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದರು.

ಹಳ್ಳಿಗಳಲ್ಲಿ ಇರುವವರಿಗೆ ಇನ್ನೂ 5,000 ಮನೆಗಳನ್ನು ಕೊಡಿಸಬೇಕು ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ಕೆಲವು ಕುಟುಂಬಗಳು ಗುಡಿಸಲಲ್ಲಿ ವಾಸಮಾಡುತ್ತಿದ್ದಾರೆ. 24,000 ಸಾವಿರ ರೂ. ಪ್ರತಿ ವರ್ಷ ಕೊಟ್ಟರೆ ಅವರ ಬದುಕಿನಲ್ಲಿ ಬದಲಾವಣೆಯಾಗುತ್ತದೆ. ಈ ಬದಲಾವಣೆಯನ್ನು  ನೋಡಲು ಬೆಂಗಳೂರಲ್ಲಿ ಇರುವವರು ಹಳ್ಳೀಗಳಿಗೆ ಬಂದು ನೋಡಬೇಕು ಎಂದರು. ದಯವಿಟ್ಟು ಗೃಹಲಕ್ಷ್ಮಿ ಯೋಜನೆ ಬಗ್ಗೆ ಯಾರಾದರೂ ವಿರೋಧ ಮಾಡಿದರೆ ಆ ಶಾಪ ತಟ್ಟುತ್ತದೆ ಎಂದು ಹೇಳಲು ಬಯಸುತ್ತೇನೆ. ಇವತ್ತು

More articles

Latest article