ಅರ್ಜುನ ಆನೆಯ ಸಮಾಧಿ ವಿಚಾರದಲ್ಲಿ ಹಣ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅರ್ಜುನನ ಸಮಾಧಿ ಕಟ್ಟಬೇಕೆಂದು ದರ್ಶನ್ ಯೋಚನೆಯಾಗಿತ್ತು. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದೆ ತಡ, ನವೀನ್ ಎಂಬುವವರು ಗ್ರೂಪ್ ಕ್ರಿಯೇಟ್ ಮಾಡಿ, ಅದರಿಂದಾನೂ ಹಣ ಕಲೆಕ್ಟ್ ಮಾಡಿದ್ದಾರೆ. ಆದರೆ ದರ್ಶನ್ ಅವರು ಹಣ ಕಲೆಕ್ಟ್ ಮಾಡುವುದು ಬೇಡ. ಅದರ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ ಎಂದು, ಕಲ್ಲುಗಳನ್ನು ಕಳುಹಿಸಿಕೊಟ್ಟಿದ್ದರು. ಆದರೆ ಅರಣ್ಯ ಇಲಾಖೆ ನಾವೇ ಕೆಲಸ ಮಾಡುತ್ತೇವೆ. ಹೊರಗಿನವರು ಕೆಲಸ ಮಾಡುವಂತೆ ಇಲ್ಲ ಎಂದು ಸಮಾಧಿಯನ್ನು ಕಟ್ಟಿ, ಹಣವನ್ನು ವಾಪಾಸ್ ನೀಡಿ, ಅದನ್ನು ಪ್ರೂಫ್ ಸಮೇತ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಆದರೆ ಆ ಹಣ ನಮಗೆ ತಲುಪಿಲ್ಲ ಎಂದು ದರ್ಶನ್ ಕಡೆಯವರು ಹೇಳಿದಾಗ, ಎಲ್ಲರ ಚಿತ್ತ ಹೋಗಿದ್ದು ನವೀನ್ ಕಡೆಗೆ. ಅವರೇ ಗ್ರೂಪ್ ಮಾಡಿದ್ದು, ಅವರದ್ದೇ ಅಕೌಂಟ್ ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಣ ಹಾಕಿದ್ದಾರೆ ಎಂದು ಸುದ್ದಿಹಬ್ಬಿತ್ತು. ಇದೀಗ ನವೀನ್ ಮಾಧ್ಯಮದವರ ಮುಂದೆ ಬಂದು ಈ ಬಗ್ಗೆ ಮಾತನಾಡಿದ್ದಾರೆ.
‘ಈ ತಿಂಗಳು ಒಂದನೇ ತಾರೀಕು ಅರ್ಜುನ ಪಡೆ ಅಂತ ಒಂದು ಗ್ರೂಪ್ ಅನ್ನು ಕ್ರಿಯೇಟ್ ಮಾಡುತ್ತೇವೆ. ಸಾರ್ವಜನಿಕರ ಒತ್ತಾಯದ ಮೇರೆಗೆ ಗ್ರೂಪ್ ಕ್ರಿಯೇಟ್ ಮಾಡೋದು. ಇದನ್ನು ಕ್ರಿಯೇಟ್ ಮಾಡಿದ ಬಳಿಕ ಒಂದು ವಾರ ಚರ್ಚೆ ನಡೆಯಿತ್ತೆ. ಗ್ರೂಪ್ ಮಾಡಿದ ಬಳಿಕ ಆರ್ ಎಫ್ ಓ ಬಳಿ ಹೋಗುತ್ತೇವೆ. ಅವರಿಂದ ಪರ್ಮಿಷನ್ ಕೂಡ ಸಿಗುತ್ತದೆ. ನಾವೂ ಅಲ್ಲಿಗೆ ಹೋದಾಗ ಡಿ ಬಾಸ್ ಕಡೆಯವರು ಕಲ್ಲನ್ನು ತಂದು ಕೊಡುತ್ತೇವೆ ಅಂತ ಸಹಾಯ ಮಾಡಿದರು. ತರಾತುರಿಯಲ್ಲಿ ಕೆಲಸ ಮುಗಿಸಿ ಸೋಷಿಯಲ್ ಮೀಡಿಯಾದಲ್ಲಿ ತೋರಿಸಿಕೊಳ್ಳುವ ಸಲುವಾಗಿ ನನ್ನ ಅಕೌಂಟ್ ಗೆ ಹಣ ಹಾಕಿದ್ದಾರೆ.
ಈ ಹಣ ಏನಕ್ಕೆ ನನ್ನ ಅಕೌಂಟ್ ಗೆ ಬಂತು ಎನ್ನುವಾಗಲೇ ಈ ವಿಚಾರ ವೈರಲ್ ಆಗಿತ್ತು. ದರ್ಶನ್ ಅವರ ಆಪ್ತ ನವೀನ್ ಎನ್ನುತ್ತಿದ್ದರು. ದರ್ಶನ್ ಸರ್ ಆಗಲಿ, ಅವರ ಆಪ್ತರಾಗಲಿ ನನ್ನ ಕಾಂಟ್ಯಾಕ್ಟ್ ನಲ್ಲಿ ಇಲ್ಲ. ಗ್ರೂಪ್ ಕ್ರಿಯೇಟ್ ಮಾಡಿದ ಬಳಿಕ 45-50 ಸಾವಿರ ಹಣ ಕಲೆಕ್ಟ್ ಆಗಿದೆ. ಅರಣ್ಯ ಇಲಾಖೆ ಹಾಕಿರುವ ಹಣ ಇನ್ನು ಪೆಂಡಿಂಗ್ ತೋರಿಸುತ್ತಿದೆ. ಹಣವನ್ನು ವಾಪಾಸ್ ಕಳುಹಿಸಿ ಸಿಕ್ಕಿಹಾಕಿಕೊಳ್ಳುವುದು ಅಲ್ಲ. ಏನು ಮಾಡುವುದು ಅಂತ ಕೇಳಲು ನನ್ನ ಹತ್ತಿರವೇ ಇಟ್ಟುಕೊಂಡಿದ್ದೀನಿ’ ಎಂದಿದ್ದಾರೆ