ಹಾವೇರಿಯಲ್ಲಿ ಭಯಾನಕ ಅಪಘಾತ: 13 ಸಾವು

Most read

ಹಾವೇರಿ: ನಿಂತಿದ್ದ ಲಾರಿಯೊಂದಕ್ಕೆ ವೇಗವಾಗಿ ಬರುತ್ತಿದ್ದ ಟೆಂಪೊ ಟ್ರಾವಲರ್ ಡಿಕ್ಕಿ ಹೊಡೆದು 13 ಮಂದಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.

ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಗುಂಡೇನಹಳ್ಳಿ ಬಳಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ಈ ಭೀಕರ ದುರ್ಘಟನೆ ಸಂಭವಿಸಿದೆ.

ಟಿಟಿಯಲ್ಲಿ ಪ್ರಯಾಣಿಸುತ್ತಿದ್ದ ಭದ್ರಾವತಿ ತಾ.ಎಮ್ಮಿಹಟ್ಟಿ ಗ್ರಾಮದ ಪರಶುರಾಮ್, ಭಾಗ್ಯ, ನಾಗಶ್ರೀ, ವಿಶಾಲಾಕ್ಷಿ, ಮಾನಸ, ಮಂಜುಳಾ, ರೂಪಾ, ಸುಭದ್ರಾ ಬಾಯಿ, ಪುಣ್ಯಾ ಬಾಯಿ , ಅರ್ಪಿತಾ, ಆದರ್ಶ ಮೃತಪಟ್ಟದ್ದಾರೆ.

ಸ್ಥಳಕ್ಕೆ ಬ್ಯಾಡಗಿ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿಯೂ ಚಿಂತಾಜನಕವಾಗಿದೆ.

ಟಿಟಿ ವಾಹನದಲ್ಲೇ ಅಪ್ಪಚ್ಚಿಯಾಗಿದ್ದ ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದು, ಇತ್ತೀಚಿನ ದಿನಗಳಲ್ಲಿ ನಡೆಸ ಭಯಾನಕ ಅಪಘಾತ ಇದಾಗಿದಸ.

ಚಿಂಚೋಳಿ ಮಾಯಮ್ಮನ ದರ್ಶನ ಮಾಡಿ ವಾಪಾಸಾಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

More articles

Latest article