ಹಿಂದಿ ರಾಷ್ಟ್ರಭಾಷೆ ಅಲ್ಲ; ಅಧಿಕೃತ ಭಾಷೆ ಅಷ್ಟೇ; ಕ್ರಿಕೆಟಿಗ ಆರ್‌. ಅಶ್ವಿನ್

Most read

ಚೆನ್ನೈ:  ಹಿಂದಿ ರಾಷ್ಟ್ರ ಭಾಷೆಯಲ್ಲ, ಅದು ಕೇವಲ ಅಧಿಕೃತ ಭಾಷೆಯಷ್ಟೇ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಆರ್‌. ಅಶ್ವಿನ್ ಹೇಳಿದ್ದಾರೆ. ಖಾಸಗಿ ಕಾಲೇಜೊಂದರ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ನೀವು ಯಾವ ಭಾಷೆಯಲ್ಲಿ ಸಂವಾದ ನಡೆಸಲು ಬಯಸುತ್ತೀರಿ’ ಎಂದು ಪ್ರಶ್ನಿಸಿದರು. ಆಗ ಇಂಗ್ಲಿಷ್‌ನಲ್ಲಿ ಮಾತನಾಡುವಂತೆ ಹಲವರು ಹೇಳಿದರು. ತಮಿಳು ಭಾಷೆಯ ಆಯ್ಕೆ ನೀಡಿದಾಗಲೂ ಬಹುತೇಕ ವಿದ್ಯಾರ್ಥಿಗಳು ಬೆಂಬಲಿಸಿದರು. ಹಿಂದಿ ಆಯ್ಕೆ ನೀಡಿದಾಗ ಯಾವ ವಿದ್ಯಾರ್ಥಿಯೂ ಪ್ರತಿಕ್ರಿಯಿಸಲಿಲ್ಲ. ಈ ವೇಳೆ ಅಶ್ವಿನ್‌ ‘ಹಿಂದಿ ರಾಷ್ಟ್ರ ಭಾಷೆಯಲ್ಲ, ಅದು ಕೇವಲ ಅಧಿಕೃತ ಭಾಷೆಯಷ್ಟೆ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದರು.

More articles

Latest article