ಪವಿತ್ರಾ ಗೌಡಗೆ ಮನೆ ಊಟ ರದ್ದುಪಡಿಸಿದ ಹೈಕೋರ್ಟ್‌

ಜೈಲಿನಲ್ಲಿ ಒರ್ವ ಕೈದಿಗೆ ದಿನಕ್ಕೆ 85 ರೂ. ಮೌಲ್ಯದ ಆಹಾರ!

ಬೆಂಗಳೂರು:  ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಜೈಲಿನಲ್ಲಿರುವ ಪ್ರಮುಖ ಆರೋಪಿ ಪವಿತ್ರಾ ಗೌಡ ಸೇರಿದಂತೆ ಮೂವರಿಗೆ ಮನೆ ಊಟಕ್ಕೆ ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಆರೋಪಿಗಳಾದ ಪವಿತ್ರಾ ಗೌಡ, ಲಕ್ಷ್ಮಣ್ ಮತ್ತು ನಾಗರಾಜ್‌ಗೆ ವಾರಕ್ಕೊಮ್ಮೆ ಮನೆ ಊಟ ಒದಗಿಸಲು 57ನೇ ಸಿಸಿಹೆಚ್ ಕೋರ್ಟ್ ಈ ಹಿಂದೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರದ ಪರವಾಗಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಹೈಕೋರ್ಟ್ ಏಕಸದಸ್ಯ ಪೀಠವು, ಕೆಳಹಂತದ ಕೋರ್ಟ್ ಆದೇಶವನ್ನು ವಜಾಗೊಳಿಸಿದೆ.

ವಿಚಾರಣೆ ವೇಳೆ ಮೌಖಿಕವಾಗಿ ಅಭಿಪ್ರಾಯ ಹಂಚಿಕೊಂಡ ನ್ಯಾಯಪೀಠ, ಜೈಲಿನ ಕೈದಿಗಳಿಗೆ ಮನೆ ಊಟ ನಿಷಿದ್ಧವಲ್ಲ. ಆದರೆ ಅದನ್ನು ಕೇವಲ ನಿಯಮಗಳಿಗನುಸಾರವಾಗಿ ಮಾತ್ರ ನೀಡಬೇಕು. ಕೈದಿ ಕೇಳಿದ ಕೂಡಲೇ ಮನೆ ಊಟ ಒದಗಿಸಲು ಅವಕಾಶವಿಲ್ಲ. ಒಂದು ವೇಳೆ ವೈದ್ಯಕೀಯ ಸಲಹೆ  ಇದ್ದರೆ ಮಾತ್ರ ಅದಕ್ಕೆ ಅವಕಾಶ ನೀಡಬಹುದು. ಕೇವಲ ಒಬ್ಬರಿಗೆ ಮನೆ ಊಟಕ್ಕೆ ಅವಕಾಶ ನೀಡಿದರೆ ಜೈಲಿನಲ್ಲಿರುವ ಉಳಿದ ಕೈದಿಗಳೂ ಅದೇ ಬೇಡಿಕೆ ಮುಂದಿಡುತ್ತಾರೆ ಎಂದು ತಿಳಿಸಿತು.

ಒರ್ವ ಕೈದಿಗೆ ದಿನಕ್ಕೆ 85 ರೂ. ಮೌಲ್ಯದ ಆಹಾರ!

ರಾಜ್ಯದ ಜೈಲುಗಳಲ್ಲಿರುವ ಕೈದಿಗಳ ಆಹಾರದ ಗುಣಮಟ್ಟದ ಬಗ್ಗೆ ನ್ಯಾಯಾಲಯ ತೀವ್ರ ಕಳವಳ ವ್ಯಕ್ತಪಡಿಸಿದೆ. ವ್ಯಕ್ತಿಗಿರುವ ಮಾನವೀಯ ಘನತೆ ಕೇವಲ ಜೈಲಿನ ಬಾಗಿಲಿನಲ್ಲೇ ಕೊನೆಯಾಗಬಾರದು. ಕೈದಿಯೊಬ್ಬರಿಗೆ ದಿನಕ್ಕೆ 85 ರೂ. ಮೌಲ್ಯದ ಆಹಾರ ಸಮರ್ಪಕವಲ್ಲ. 85 ರೂಪಾಯಿಯಲ್ಲಿ ಪೌಷ್ಟಿಕ ಆಹಾರ ನೀಡಲು ಸಾಧ್ಯವಿಲ್ಲ. ಆದ್ದರಿಂದ ಊಟದ ಗುಣಮಟ್ಟದ ಬಗ್ಗೆ ಮರುಪರಿಶೀಲನೆ ಅಗತ್ಯವಿದೆ ಎಂದು ಕೋರ್ಟ್ ಹೇಳಿದೆ. 

More articles

Latest article

Most read