ಇಲ್ಲಿ  ಒಂದು ಕೆ.ಜಿ ಕರ್ಜಿಕಾಯಿಯ ಬೆಲೆ ಬರೋಬ್ಬರಿ ರೂ. 50 ಸಾವಿರ!

Most read

ಗೊಂಡಾ (ಉತ್ತರ ಪ್ರದೇಶ): ದೇಶದಾದ್ಯಂತ ಹೋಳಿ ಸಂಭ್ರಮ ಆರಂಭವಾಗಿದ್ದು, ಸಿಹಿ ತಿಂಡಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹಾಗೆಯೇ ಬೆಲೆಯೂ ಸಹಜವಾಗಿಯೇ ಏರುವುದು ವಾಡಿಕೆ. ಆದರೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಬೇಕರಿಯೊಂದರಲ್ಲಿ ವಿಶೇಷವಾದ ಕರ್ಜಿಕಾಯಿ (ಗುಜಿಯಾ) ಬೆಲೆ ಕೇಳಿದರೆ ತಲೆ ತಿರುಗಿ ಬೀಳುವಂತಾಗುತ್ತದೆ. ಈ ಕರ್ಜಿಕಾಯಿಗೆ ಚಿನ್ನದ ಲೇಪನ ಮಾಡಿರುವುದರಿಂದ ಬೆಲೆ ಕೆಜಿಗೆ ರೂ. 50 ಸಾವಿರ ನಿಗದಿಪಡಿಸಲಾಗಿದೆ ಎಂದು ಬೇಕರಿ ಮಾಲೀಕರು ಹೇಳುತ್ತಾರೆ.ಒಂದು ಕರ್ಜಿ ಕಾಯಿಯನ್ನು ರೂ. 1,300ಕ್ಕೆ ಮಾರಾಟ ಮಾಡಲಾಗುತ್ತಿದೆ.

 ಈ ಕುರಿತು ಮಾತನಾಡಿರುವ ಬೇಕರಿ ಮಾಲೀಕ ಶಿವಕಾಂತ್ ಚತುರ್ವೇದಿ, ಈ ವಿಶೇಷ ಕರ್ಜಿಕಾಯಿಯ ಮೇಲೆ 24 ಕ್ಯಾರೆಟ್‌ನ ಒಂದು ತೆಳು ಚಿನ್ನದ ಪದರದ ಲೇಪನವಿದೆ. ಕರ್ಜಿಕಾಯಿ ಒಳಗೆ ಒಣ ಹಣ್ಣುಗಳನ್ನು ಏರ್ಪಡೆ ಮಾಡಲಾಗಿದೆ. ಹೀಗಾಗಿ ಇದರ ಬೆಲೆ ದುಬಾರಿ ಎಂದು ತಿಳಿಸಿದ್ದಾರೆ.

ಸಾಂಪ್ರದಾಯಿಕ ಕರ್ಜಿಕಾಯಿಗಳು ಸಾಮಾನ್ಯವಾಗಿ ಹಾಲಿನ ಕೋವಾ, ಬೀಜಗಳು ಮತ್ತು ಒಣಗಿದ ಹಣ್ಣುಗಳಿಂದ ತಯಾರಿಸಲಾಗುತ್ತದೆ. ಈ ವಿಶೇಷ ಕರ್ಜಿಕಾಯಿಗೆ ಚಿನ್ನದ ಲೇಪನ ಮಾಡಿದ ಕಾರಣದಿಂದ ಹೊಂಬಣ್ಣದಿಂದ ಹೊಳೆಯುತ್ತಿದೆ. ಇದಲ್ಲದೆ ಲಖನೌ ನಗರದ ಅಂಗಡಿಯೊಂದರಲ್ಲಿ 25 ಇಂಚಿನ, 6 ಕೆ.ಜಿ ತೂಕದ ಕರ್ಜಿಕಾಯಿ ತಯಾರಿಸಲಾಗಿದೆ. ಇದು ಹೊಸ ದಾಖಲೆ ನಿರ್ಮಿಸಿದ್ದು, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಪಟ್ಟಿಗೆ ಸೇರಿದೆ.

More articles

Latest article