ಬೆಂಗಳೂರು: ಚಿನ್ನ ಕಳ್ಳ ಸಾಗಾಣೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ನಿಯಮಗಳನ್ನು ದುರ್ಬಳಕೆ ಮಾಡಲಾಗುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಶಿಷ್ಟಾಚಾರ ನಿಯಮಗಳನ್ನು ಪರಾಮರ್ಶಿಸಲು ರಾಜ್ಯ ಗೃಹ ಇಲಾಖೆ ನಿರ್ಧರಿಸಿದೆ.
ಮತ್ತಷ್ಟು ಬಿಗಿಗೊಳಿಸಲಾಗಿದೆ. ವಿಶೇಷವಾಗಿ, ಪ್ರಭಾವಿ ಹಿನ್ನೆಲೆ ಹೊಂದಿರುವ ವ್ಯಕ್ತಿಗಳಿಗೆ ಕಠಿಣ ಭದ್ರತಾ ಶಿಷ್ಟಾಚಾರಗಳನ್ನು ಪರಿಚಯಿಸಲಾಗಿದೆ. ಇನ್ನು ಮುಂದೆ ಶಿಷ್ಟಾಚಾರ ಸವಲತ್ತುಗಳನ್ನು ಹಿರಿಯ ಅಧಿಕಾರಿಗಳಿಗೆ ಮಾತ್ರ ನೀಡಲಾಗುವುದು. ಇನ್ನು ಮುಂದೆ ಹಿರಿಯ ಅಧಿಕಾರಿಗಳು, ಅವರ ಕುಟುಂಬ ವರ್ಗ ಮತ್ತು ಸ್ನೇಹಿತರಿಗೆ ನೀಡುತ್ತಿದ್ದ ಶಿಷ್ಟಾಚಾರವನ್ನು ಇನ್ನು ಮುಂದೆ ರದ್ದುಗೊಳಿಸಲು ಇಲಾಖೆ ತೀರ್ಮಾನಿಸಿದೆ. ಕೇವಲ ನಿಯೋಜಿತ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳಿಗೆ ಮಾತ್ರ ಶಿಷ್ಟಾಚಾರ ಲಭ್ಯವಾಗಲಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕನ್ನಡ ನಟಿ ರನ್ಯಾ ರಾವ್ ಬಂಧನದ ಬಳಿಕ ಈ ಕ್ರಮ ವಹಿಸಲಾಗುತ್ತಿದೆ ಎಂದು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್ಆರ್ ಉಮಾಶಂಕರ್ ತಿಳಿಸಿದ್ದಾರೆ.
ಐಎಎಸ್ ಮತ್ತು ಐಪಿಎಸ್ ಅಧಿಕಾರಿಗೆ ನೇರ ಬೆದರಿಕೆ ಇದ್ದಾಗ ಮಾತ್ರ ಅವರ ಸಮೀಪದ ಸಂಬಂಧಿಗಳಿಗೆ ಭದ್ರತೆಯನ್ನು ಒದಗಿಸಲಾಗುತ್ತದೆ.
ಗುಪ್ತಚರ ನಿರ್ದೆಶನಾಲಯದ (ಡಿಆರ್ ಐ) ಅಧಿಕಾರಿಗಳು ಚಿನ್ನವನ್ನು ಕಳ್ಳ ಸಾಗಾಣೆ ಮಾಡುತ್ತಿದ್ದ ರನ್ಯಾ ರಾವ್ ಅವರನ್ನು ಬಂಧಿಸಿದ ನಂತರ ರಾಜ್ಯ ಸರ್ಕಾರ ಒದಗಿಸುತ್ತಿದ್ದ ಶಿಷ್ಟಾಚಾರ ಕುರಿತು ಚರ್ಚೆ ಆರಂಭವಾಗಿದೆ. ರನ್ಯಾ ಅವರಿಗೆ ಭದ್ರತೆ ಒದಗಿಸಲು ಬಂದಿದ್ದ ಅಧಿಕಾರಿ ಈ ಪ್ರಕರಣದ ವಿಚಾರಣೆಯಲ್ಲಿ ಭಾಗಿಯಾಗಲು ನಿರಾಕರಿಸಿದ್ದಾರೆ. ಡಿಜಿಪಿ ಅವರ ಪುತ್ರಿಯನ್ನು ಸ್ವಾಗತಿಸಲು ಮಾತ್ರ ತಮಗೆ ನಿರ್ದೇಶನ ನೀಡಲಾಗಿತ್ತೇ ಹೊರತು ಅವರು ಏನನ್ನು ತರುತ್ತಾರೆ ಎನ್ನವುದು ತಮಗೆ ತಿಳಿದಿರಲಿಲ್ಲ ಎಂದು ಡಿಆ ಐ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಮಧ್ಯೆ, 17 ಚಿನ್ನದ ಗಟ್ಟಿಗಳನ್ನು ಕಳ್ಳ ಸಾಗಾಣೆ ಮಾಡಿದ್ದನ್ನು ರನ್ಯಾ ರಾವ್ ಒಪ್ಪಿಕೊಂಡಿದ್ದಾರೆ ಎಂದು ಡಿಆರ್‌ಐ ಮೂಲಗಳು ಖಚಿತಪಡಿಸಿವೆ. ಇದರ ತೂಕ
14.2 ಕೆಜಿ ಮತ್ತು ಇದರ ಮೌಲ್ಯ 12 ಕೋಟಿ ರೂ. ಎಂದು ತಿಳಿದು ಬಂದಿದೆ. ರನ್ಯಾ ರಾವ್ ದುಬೈ ದೇಶಕ್ಕೆ ವರ್ಷಕ್ಕೆ ಸುಮಾರು 30 ಬಾರಿ ಪ್ರವಾಸ ಕೈಗೊಳ್ಳುತ್ತಿದ್ದರು. ಈ ರೀತಿ ಕಳ್ಳ ಸಾಗಾಣೆ ಮಾಡುತ್ತಿದ್ದ ಚಿನ್ನಕ್ಕೆ ಪ್ರತಿ ಕೆಜಿಗೆ 1 ಲಕ್ಷದಂತೆ ಕಮೀಷನ್ ಸಿಗುತ್ತಿದ್ದು. ಹೀಗೆ ಪ್ರತಿ ವಿದೇಶ ಪ್ರವಾಸಕ್ಕೆ ಸರಾಸರಿ 12-15 ಲಕ್ಷ ರೂ. ಕಮೀಷನ್ ಪಡೆದುಕೊಳ್ಳುತ್ತಿದ್ದರು. ಈ ಚಿನ್ನವನ್ನು ಅವರು ಬೆಂಗಳೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗಳಿಗೆ ನೀಡುತ್ತಿದ್ದರು ಎಂದು ಡಿಆರ್ ಐ ಮೂಲಗಳು ಹೇಳಿವೆ.