ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರು ದೇವಸ್ಥಾನದಲ್ಲಿ ಕಾಲು ಜಾರಿಬಿದ್ದಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆ ಅವರನ್ನು ಹೊಳೆನರಸೀಪುರದ ಆಸ್ಪತ್ರೆಗೆ ದಾಖಲು ಮಾಡಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಆಷಾಢಮಾಸ ಪೂಜೆಗೆಂದು ಹೊಳೆನರಸೀಪುರದ ಮನೆ ದೇವರು ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ತೆರಳಿದ್ದ ಶಾಸಕ ಎಚ್‌ಡಿ ರೇವಣ್ಣ ಆಕಸ್ಮಿಕವಾಗಿ ಕಾಲು ಜಾರಿಬಿದ್ದು ಪಕ್ಕೆಲುಬು ಮುರಿದಿದೆ ಎನ್ನಲಾಗಿದೆ. ಹೊಳೆನರಸೀಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆಷಾಢ ಮಾಸದ ಏಕಾದಶಿ ಹಿನ್ನೆಲೆ ಬುಧವಾರ ಉಪವಾಸವಿದ್ದ ರೇವಣ್ಣ ಸುಮಾರು 11 ಗಂಟೆ ಸುಮಾರಿಗೆ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.