ಹತ್ರಾಸ್ ಕಾಲ್ತುಳಿತ ಪ್ರಕರಣ : ಕಾರ್ಯಕ್ರಮದ ರೂವಾರಿ ಭೋಲೆ ಬಾಬಾ ಹೇಳಿದ್ದೇನು ಗೊತ್ತೇ?

ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 121 ಜನರು ಮೃತಪಟ್ಟ ದುರಂತದ ಬಳಿಕ ಈ ಭೋಲೆ ಬಾಬಾ ಮಾಧ್ಯಮಕ್ಕೆ ಫಸ್ಟ್ ರಿಯಾಕ್ಟನ್ ಕೊಟ್ಟಿದ್ದಾರೆ.

ಈ ಕುರಿತು ಐಎನ್ಐ ಜೊತೆ ಮಾತನಾಡಿರು ಭೋಲೆ ಬಾಬಾ, ಜುಲೈ 2ರ ಘಟನೆಯ ನಂತರ ನಾನು ತುಂಬಾ ದುಃಖಿತನಾಗಿದ್ದೇನೆ. ದೇವರು ನಮಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ. ದಯವಿಟ್ಟು ನಂಬಿಕೆಯನ್ನು ಇಡಿ. ಅವ್ಯವಸ್ಥೆಯನ್ನು ಸೃಷ್ಟಿಸಿದ ಯಾರನ್ನೂ ಸರ್ಕಾರ ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ… ನನ್ನ ವಕೀಲ ಎ.ಪಿ.ಸಿಂಗ್ ಅವರ ಮೂಲಕ ಸಮಿತಿ ರಚಿಸಿದ್ದು, ಎಲ್ಲಾ ಸದಸ್ಯರನ್ನು ದುಃಖಿತ ಕುಟುಂಬಗಳು ಮತ್ತು ಗಾಯಾಳುಗಳ ಜೊತೆಗೆ ನಿಂತು ಅವರ ಜೀವನದುದ್ದಕ್ಕೂ ಅವರಿಗೆ ಸಹಾಯ ಮಾಡಬೇಕೆಂದು ವಿನಂತಿಸಿದೆ ಎಂದು ಹೇಳಿದ್ದಾರೆ.

ಹತ್ರಾಸ್ ಜಿಲ್ಲೆಯ ಸಿಕಂದರಾ ರಾವ್‌ನಲ್ಲಿ ನಡೆಯುತ್ತಿದ್ದ ‘ಸತ್ಸಂಗ’ ಕಾರ್ಯಕ್ರಮಕ್ಕೆ ಲಕ್ಷಗಟ್ಟಲೇ ಜನ ಸೇರಿದ್ದರು. ಈ ವೇಳೆ ಭೋಲೆ ಬಾಬಾ ಅನುಯಾಯಿಗಳು ಭೋಲೆ ಬಾಬಾ ವಾಹನವು ಹಾದುಹೋಗುವ ಮಾರ್ಗದಿಂದ ಧೂಳು ಸಂಗ್ರಹಿಸಲು ಮುಗಿಬಿದ್ದ ವೇಳೆ ದುರಂತ ಸಂಭವಿಸಿದ್ದು, 121 ಜನ ಸಾವನ್ನಪ್ಪಿದ್ದು, ಮಕ್ಕಳು ಮಹಿಳೆಯರು ಸೇರಿ ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಭೋಲೆ ಬಾಬಾ ಹೆಸರಲ್ಲಿ ನೂರಾರು ಕೋಟಿ ಆಸ್ತಿ ಇದ್ದು, ಆಶ್ರಮಗಳು, ಐಷಾರಾಮಿ ಕಾರುಗಳು ಮತ್ತು ಕನಿಷ್ಠ ₹ 100 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ.

More articles

Latest article

Most read