ಹತ್ರಾಸ್ ಧಾರ್ಮಿಕ ಸಭೆಯಲ್ಲಿ ಕಾಲ್ತುಳಿತ: ಮೃತರ ಸಂಖ್ಯೆ 121ಕ್ಕೆ ಏರಿಕೆ, ಸಾಕ್ಷ್ಯ ನಾಶಕ್ಕೆ ನಿಂತ ಬಾಬಾ ಸಹಚರರು!

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಭೋಲೆ ಬಾಬಾ ಸತ್ಸಂಗ ಕಾರ್ಯಕ್ರಮದ ವೇಳೆ ಕಾಲ್ತುಳಿತ ಸಂಭವಿಸಿದ್ದು, ಮೃತಪಟ್ಟವರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 28 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡು ಅಳುತ್ತಿರುವ ಜನರ ಆಕ್ರಂದನ ಮುಗಿಲುಮುಟ್ಟಿದ್ದು ಒಂದುಕಡೆಯಾದರೆ ಮತ್ತೊಂದೆಡೆ ಈ ಭಾರೀ ಸಾವಿಗೆ ಕಾರಣವಾದ ಬಾಬಾ ಮಾತ್ರ ಪೊಲೀಸರ ಕೈಗೆ ಸಿಗದೆ ನಾಪತ್ತೆಯಾಗಿದ್ದಾನೆ. ಯುಪಿ ಪೊಲೀಸರು ಬಾಬಾ ಹುಡುಕಾಟದಲ್ಲಿ ನಿರತರಾಗಿದ್ದಾರೆ.

ಬಾಬಾನನ್ನು ರಕ್ಷಿಸಲು ತನ್ನ ಸಹಚರರು, ಭಕ್ತರು ಕಮ್ಮಿ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ ಅನ್ನೋದನ್ನು ತೋರ್ಪಡಿಸಲು ಕಾರ್ಯಕ್ರಮ ನಡೆದ ಜಾಗದಲ್ಲಿ ಇರಿಸಲಾಗಿದ್ದ ಭಕ್ತರ ಚಪ್ಪಲಿಗಳನ್ನು ಪಕ್ಕದ ಗದ್ದೆಯಲ್ಲಿ ಹೂತು ಹಾಕಿರುವ ಘಟನೆ ತಿಳಿದುಬಂದಿದೆ.

ಯುಪಿ ಪೊಲೀಸರು ಹಲವು ಮಂದಿಯ ಮೇಲೆ ನರಹತ್ಯೆಯ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಾಕ್ಷ್ಯ ಮರೆಮಾಚಿದ ಸೆಕ್ಷನ್ ಅಡಿಯಲ್ಲು ಪ್ರಕರಣ ದಾಖಲಾಗಿದೆ.

ಧಾರ್ಮಿಕ ಸಭೆಯಲ್ಲಿ 80 ಸಾವಿರ ಜನ ಸೇರುತ್ತಾರೆ ಎಂದು ಅನುಮತಿ ಪಡೆದಿದ್ದರು. ಆದರೆ ಕಾರ್ಯಕ್ರಮದಲ್ಲಿ 2.5 ಲಕ್ಷಕ್ಕಿಂತ ಹೆಚ್ಚು ಜನ ಸೇರಿದ್ದರು ಎನ್ನಲಾಗಿದೆ.

More articles

Latest article

Most read