ಹಾಸನ | ಇಂದಿನ ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ : ಪುಂಡಾನೆ ಸ್ಥಳಾಂತರಿಸಲು ಸಿದ್ದತೆ!

ಕಾಡಾನೆಗಳ ಸೆರೆ ಹಿಡಿಯುವ ಸಂದರ್ಭದಲ್ಲಿ ಅರ್ಜುನ ಮೃತಪಟ್ಟ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು ಮತ್ತೆ ಹಾಸನ ಜಿಲ್ಲೆಯ ವಿವಿಧೆಡೆ ಉಪಟಳ ನೀಡುತ್ತಿರುವ ಪುಂಡಾನೆ ಸೆರೆ ಕಾರ್ಯಾಚರಣೆ ಇಂದು ಶುರುವಾಗಿ ಯಶಸ್ವಿ ಕಾರ್ಯಚರಣೆ ಮಾಡಿದ್ದಾರೆ.

ಮೈಸೂರು ಅಂಬಾರಿ ಹೊತ್ತಿದ್ದ ಅಭಿಮನ್ಯು ನೇತೃತ್ವದಲ್ಲಿ ದುಬಾರೆ ಹಾಗೂ ಮತ್ತಿಗೋಡು ಶಿಬಿರದಿಂದ ಎಂಟು ಸಾಕಾನೆಗಳಿಂದ, ಹಾಸನದ ನಲ್ಲೂರು ಗ್ರಾಮದ ಸಾರಾ ಎಸ್ಟೇಟ್‌ನಲ್ಲಿರುವ ಒಂಟಿ ಸಲಗವನ್ನು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.

HASSAN-BREAKING

ಹಾಸನ : ಇಂದಿನಿಂದ ಕಾಡಾನೆ ಸೆರೆ ಕಾರ್ಯಚರಣೆ

ಮೊದಲ ದಿನದ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಮೈದ್ಯರಿಂದ ಪುಂಡಾನೆಗೆ ಅರವಳಿಕೆ ಚುಚ್ಚುಮದ್ದು ಹಾಕಲಾಗಿದೆ. ಸ್ವಲ್ಪ ದೂರ ಓಡಿ ಪ್ರಜ್ಞೆ ತಪ್ಪಿದ ಕಾಡಾನೆಗೆ ಸಾಕಾನೆ ಸಹಾಯದಿಂದ ಹಗ್ಗ ಹಾಕಿ ಸ್ಥಳಾಂತರಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಸಿದ್ದತೆ ನಡೆಸುತ್ತಿದ್ದಾರೆ.

ಡಿ.4 ರಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮದಗಜದೊಂದಿಗೆ ಕಾದಾಟ ವೇಳೆ ಅರ್ಜುನ ವೀರಮರಣ ಹೊಂದಿದ್ದ. ಅಂದಿನಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.

ಇದೀಗ ಮತ್ತೆ ಆರಂಭವಾಗುತ್ತಿದೆ. ಇದಕ್ಕಾಗಿ ಅಭಿಮನ್ಯು, ಪ್ರಶಾಂತ, ಸುಗ್ರೀವ, ಅಶ್ವತ್ಥಾಮ, ಕರ್ನಾಟಕ ಭೀಮ, ಹರ್ಷ, ಮಹೇಂದ್ರ, ಧನಂಜಯ ಸೇರಿ ಎಂಟು ಸಾಕಾನೆಗಳು ಆಗಮಿಸುವೆ. ಇಂದು ಸ್ಥಳೀಯ ಶಾಸಕ ಎಚ್.ಕೆ.ಸುರೇಶ್ ಹಾಗೂ ಅರಣ್ಯ ಅಧಿಕಾರಿಗಳು ಪೂಜೆ ಸಲ್ಲಿಸಿ ಕಬ್ಬು, ಬೆಲ್ಲ ನೀಡಿ ಆಪರೇಷನ್ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

More articles

Latest article

Most read