ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹರ್ಷಿಕಾ ಪೂಣಚ್ಚ ಅವರು ಇದೀಗ ನಿರ್ದೇಶನಕ್ಕೆ ಇಳಿದಿದ್ದಾರೆ. ಅವರು ನಿರ್ದೇಶನ ಮಾಡುತಿರುವುದು ಎಷ್ಟು ಕುತೂಹಲಕಾರಿಯೋ ಅವರ ನಿರ್ದೆಶನದ ಸಿನಿಮಾ ಟೈಟಲ್ ಕೂಡ ಅಷ್ಟೇ ಕುತೂಹಲ ಮೂಡಿಸಿದೆ. ‘ಚಿ: ಸೌಜನ್ಯ’ ಅವರ ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರದ ಟೈಟಲ್. ಟೈಟಲ್ ನ ಪೋಸ್ಟರ್ ರಿಲೀಸ್ ಆಗಿದ್ದು, ‘ಒಂದು ಹೆಣ್ಣಿನ ಕಥೆ’ ಎನ್ನುವ ಟ್ಯಾಗ್ ಲೈನ್ ಕೊಡಲಾಗಿದೆ. ಈ ಪೋಸ್ಟರ್ ಸಾಕಷ್ಟು ಸಂಚಲನ ಮೂಡಿಸಿದ್ದು ವೈರಲ್ ಆಗುತ್ತಿದೆ. ‘ಚಿ: ಸೌಜನ್ಯ’ ಸಿನಿಮಾದ ಪೋಸ್ಟರ್ ಇಲ್ಲಿದ್ದು ಚಿತ್ರಕತೆ ಹೇಗಿರಬಹುದು ಎನ್ನುವುದು ನಿಮ್ಮ ಊಹೆಗೆ ಬಿಟ್ಟ ವಿಷಯ.
ಸೌಜನ್ಯ ಹತ್ಯೆ ಪ್ರಕರಣ ಕುರಿತು ಇಡೀ ರಾಜ್ಯಾದ್ಯಂತ ಮತ್ತೆ ಚರ್ಚೆಗಳು ಆರಂಭವಾದ ಬೆನ್ನಲ್ಲೇ ಹರ್ಷಿಕಾ ಅವರು ‘ಚಿ: ಸೌಜನ್ಯ’ ಸಿನಿಮಾ ನಿರ್ದೇಶನ ಪ್ರಕಟಿಸಿರುವುದು ಗಾಂಧಿನಗರದಲ್ಲಿ ಮತ್ತಷು ಕುತೂಹಲ ಮೂಡಿಸಿದೆ. ಇದು ನೈಜ ಘಟನೆ ಆಧಾರಿತ ಕಾಲ್ಪನಿಕ ಕಥೆ ಎಂದು ಹರ್ಷಿಕಾ ಅವರೇ ಹೇಳಿಕೊಂಡಿದ್ದಾರೆ.
ಚಿತ್ರಕತೆ ಕೆಲಸ ಪೂರ್ಣಗೊಂಡಿದ್ದು, ಏಪ್ರಿಲ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಮುಖ್ಯ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಳ್ಳಲಿದ್ದು, ವಿಲನ್ ಪಾತ್ರಗಳಲ್ಲಿ ಉಗ್ರಂ ಮಂಜು, ಕಾಕ್ರೊಚ್ ಸುದೀ ಕಾಣಿಸಿಕೊಳ್ಳಲಿದ್ದಾರೆ. ಹರ್ಷಿಕಾ ಅವರು 2023ರಲ್ಲಿ ಭುವನ್ ಪೊನ್ನಣ್ಣ ಅವರನ್ನು ವಿವಾಹವಾಗಿದ್ದು, ಮಗುವಿನ ತಾಯಿಯಾಗಿದ್ದಾರೆ. ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದು, ಆಲ್ ದ ಬೆಸ್ಟ್ ಹೇಳೋಣ.