ಮಳೆ ಹಾನಿ ವಿಷಯವಾಗಿ ಪ್ರಶ್ನಿಸಿದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಿಜೆಪಿ ಶಾಸಕ ಹರೀಶ್ ಪೂಂಜಾ

Most read

ಕೋಮುದ್ವೇಷ ಭಾಷಣಗಳಿಗೆ ಹೆಚ್ಚು ಸುದ್ದಿಯಾಗುವ ಬೆಳ್ತಂಗಡಿ ಶಾಸಕ ಹರೂಶ್ ಪೂಂಜಾ ನಿನ್ನೆ ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ವರದಿಯಾಗಿದೆ.

ಹೌದು, ಇತ್ತೀಚಿಗೆ ಸುರಿದ ಭಾರೀ ಮಳೆಗೆ ಬೆಳ್ತಂಗಡಿ ತಾಲೂಕಿನ ಸವಾಣಾಲು ಗ್ರಾಮದ ಪಿಲಿಕಲ ರಸ್ತೆ ಬಿರುಕು ಬಿಟ್ಟು ವಾಹನ ಸಂಚಾರ ಹಾಗೂ ಜನರ ಓಡಾಟಕ್ಕೆ ತೊಂದರೆ ಉಂಟಾಗಿತ್ತು. ಇಲ್ಲಿಗೆ ಭೇಟಿ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರನ್ನು ಸ್ಥಳೀಯ ಜನರು ಮಳೆ ಹಾನಿ ಕುರಿತು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಮಳೆ ಹಾನಿ ಉಂಟಾದಾಗ ಬರದೇ ಮಳೆ ಸಂಪೂರ್ಣ ನಿಂತ ಮೇಲೆ ಬಂದಿದ್ದೀರಿ. ಇಷ್ಟು ತಡವಾಗಿ ಬಂದಿದ್ದೀರ ಶಾಸಕರೇ ಎಂದು ಕೇಳಿದ ಗ್ರಾಮಸ್ಥರಿಗೆ ಶಾಸಕ ಹರೀಶ್, ತಡವಾಗಿ ಬಂದಿದ್ದರ ಬಗ್ಗೆ ಕೇಳುವ ಹಕ್ಕು ನಿನಗಿನ್ನ ನಾಯಿ ಎಂಬ ಅವಾಚ್ಯ ಮಾತುಗಳನ್ನು ಹಾಡಿ ಈ ತರ ಪ್ರಶ್ನೆ. ಅಡಿದ್ರೆ ದೇವರ ಮೇಲೆ ಇಡುತ್ತೇನೆ ಎಂದು ಗ್ರಾಮಸ್ಥರಿಗೆ ಬ್ಲಾಕ್ ಮೇಲ್ ಮಾಡಿರುವ ಘಟನೆ ನಡೆದಿದೆ‌.

ಮಳೆಗೆ ಹಲವು ಮನೆಗಳು, ರಸ್ತೆಗಳು ಮತ್ತು ಜನಜೀವನ ಅಸ್ತವ್ಯಸ್ತವಾಗಿದ್ದು ಅಂದು ಬಾರದ ಶಾಸಕರು ಇಂದು ಮಳೆ ನಿಂತಮೇಲೆ ಬಂದಿದ್ದಾರೆ. ಈಗ ನಮ್ಮ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಬಿಜೆಪಿ ಶಾಸಕರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರ ನಡುವೆ ತೀರ್ವ ವಾಗ್ವಾದ ನಡೆದಿದೆ‌. ಜಟಾಪಟಿ ತೀರ್ವತೆ ಹೆಚ್ಚುತ್ತಲೇ ಶಾಸಕ ಹರೀಶ್ ಪೂಂಜಾ ಸ್ಥಳದಿಂದ ಪರಾರಿಯಾಗಿದ್ದಾರೆ.

ಇನ್ನು ಮತ್ತೊಂದೆಡೆ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದ್ದ ಶಾಸಕ ಹರೀಶ್ ಪೂಂಜಾ, ಈ ದೇಶಕ್ಕೆ ಕೇವಲ ಶಾಂತಿಯಿಂದ, ಕೇವಲ ಚರಕ ತಿರುಗಿಸಿದರಿಂದ ಈ ದೇಶಕ್ಕೆ ಸ್ವಾತಂತ್ಯ್ರ ಬಂದಿಲ್ಲ ಎಂದು ಮಹಾತ್ಮ ಗಾಂಧಿಯವರನ್ನು ಮತ್ತು ಅವರ ಹೋರಾಟವನ್ನು ಟೀಕೆ ಮಾಡಿದ್ದರು.

More articles

Latest article