PHD  ಗೈಡ್‌ಗಳಿಂದ ಸಂಶೋಧನಾರ್ಥಿಗಳಿಗೆ ಕಿರುಕುಳ; ವಿದ್ಯಾರ್ಥಿಗಳನ್ನು ಸಭ್ಯವಾಗಿ ನಡೆಸಿಕೊಳ್ಳಲು ಕುವೆಂಪು ವಿವಿ ಸುತ್ತೋಲೆ

ಶಿವಮೊಗ್ಗ: ಪಿ.ಹೆಚ್.ಡಿ. ಸಂಶೋಧನಾರ್ಥಿಗಳನ್ನು ಸಭ್ಯವಾಗಿ ಮತ್ತು ಯಾವುದೇ ದೂರುಗಳಿಗೆ ಆಸ್ಪದವಿಲ್ಲದಂತೆ ನಡೆಸಿಕೊಳ್ಳಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳು ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ಈ ಕುರಿತು ಯಾವುದೇ ರೀತಿಯ ದೂರುಗಳು ಸ್ವೀಕೃತವಾದಲ್ಲಿ, ಅವುಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ವಿಶ್ವವಿದ್ಯಾಲಯದ ವ್ಯಾಪ್ತಿಯ ಎಲ್ಲಾ ಮಾರ್ಗದರ್ಶಕರಿಗೆ ಸೂಚನೆ ನೀಡಲಾಗಿದೆ.

ಆಗಸ್ಟ್‌ 12ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಕೆಲವು ಮಾರ್ಗದರ್ಶಕರು ತಮ್ಮ ಪಿಹೆಚ್.ಡಿ. ಸಂಶೋಧನಾ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಚರ್ಚೆ ನಡೆದಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಈ ನಿಟ್ಟಿನಲ್ಲಿ ಕುಲಪತಿ ಡಾ. ಶರತ್ ಅನಂತಮೂರ್ತಿ ಅವರ ಆದೇಶದಂತೆ ಇನ್ನು ಮುಂದೆ ಎಲ್ಲಾ ವಿಭಾಗಗಳಲ್ಲಿ ಈ ಕುರಿತು ಯಾವುದೇ ರೀತಿಯ ದೂರುಗಳು ಸ್ವೀಕೃತವಾದಲ್ಲಿ, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದೆಂದು ಎಲ್ಲಾ ಮಾರ್ಗದರ್ಶಕರುಗಳ ಗಮನಕ್ಕೆ ತರಲು ವಿಭಾಗಾಧ್ಯಾಕ್ಷರುಗಳಿಗೆ ಈ ಮೂಲಕ ತಿಳಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಉಪ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More articles

Latest article

Most read