ಹಾಸನ: ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್ ಡ್ರೈವ್ ಮತ್ತು ಅದರ ವಿಕೃತ ಲೈಂಗಿಕ ದಂಧೆಗೆ ಕಾರಣರಾದ ಅವರನ್ನು ಕಾನೂನಿನ ಪೂರ್ಣ ಪ್ರಮಾಣದಲ್ಲಿ ಶಿಕ್ಷೆ ನೀಡಬೇಕು ಎಂದು ಚಿತ್ರನಟ, ಚಿಂತಕ ಚೇತನ್ ಅಹಿಂಸಾ ಆಗ್ರಹಿಸಿದ್ದಾರೆ.
ಈ ಕುರಿತು ಫೇಸ್ ಬುಕ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ಹಾಸನ ಮತ್ತು ಕರ್ನಾಟಕದಾದ್ಯಂತ ಲಿಂಗ ನ್ಯಾಯ ಗುಂಪುಗಳು ಸಂತ್ರಸ್ತರಿಗೆ ಅಪರಾಧಿ/ಗಳನ್ನು ಎದುರಿಸಲು ಅಗತ್ಯವಾದ ಬೆಂಬಲವನ್ನು ಒದಗಿಸಬೇಕೆಂದು ನಾವು ಕೇಳಿಕೊಳ್ಳುತ್ತೇವೆ.
ಹಾಸನ ಪೆನ್ ಡ್ರೈವ್ ಪ್ರಕರಣ ಯಾವುದೇ ಸಂಸದ/ ಅಭ್ಯರ್ಥಿಗೆ ಸಂಬಂಧಿಸಿದ್ದರೆ, ಅಂತವರನ್ನು ಸೋಲಿಸಬೇಕು ಎಂದು ಚೇತನ್ ಕರೆ ನೀಡಿದ್ದಾರೆ.
ಹಾಸನದಲ್ಲಿ ರಾಜಕೀಯ ನಾಯಕರೊಬ್ಬರು ಹಲವು ಮಹಿಳೆಯರೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿ, ತಾನೇ ಅದೇ ರೆಕಾರ್ಡ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು, ಕಳೆದ ಎರಡು ದಿನಗಳಿಂದ ವಾಟ್ಸಾಪ್ ಗಳಲ್ಲಿ ವಿಡಿಯೋಗಳು ಹರಿದಾಡುತ್ತಿವೆ.
ವಿಡಿಯೋಗಳಿರುವ ಪೆನ್ ಡ್ರೈವ್ ಗಳನ್ನು ಕೆಲ ವ್ಯಕ್ತಿಗಳು ಜನರು ಓಡಾಡುವ ಸ್ಥಳಗಳಲ್ಲಿ ಎಸೆದು ಹೋಗಿದ್ದಾರೆ ಎಂಬ ವದಂತಿಗಳು ಹಬ್ಬಿವೆ.