ಸಂಸತ್ ಅಧಿವೇಶನದಿಂದ ಸಂಸದರ ಅಮಾನತನ್ನು ಬಿಜೆಪಿ ಎಂಎಲ್ಸಿ ಅಡಗೂರು ಎಚ್.ವಿಶ್ವನಾಥ್, ಪ್ರಧಾನ ಮಂತ್ರಿಗೆ ಮಾಧ್ಯಮಗಳ ಮುಂದೆ ಬರುವ ತಾಕತ್ತು ಇಲ್ಲ ಎಂದು ಟೀಕಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ಎಂಎಲ್‌ಸಿ ಎಚ್.ವಿಶ್ವನಾಥ್, ಲೋಕಸಭೆ, ರಾಜ್ಯಸಭೆಯ ಒಟ್ಟು 142 ಸಂಸದರನ್ನು ಅಮಾನತು ಮಾಡಲಾಗಿದೆ. ನುಸುಳುಕೋರರ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅಮಾನತು ಮಾಡಲಾಗಿದೆ. ಸಂಸತ್ತು ಇರೋದೇ ಚರ್ಚೆ ಮಾಡೋದಕ್ಕೆ. ಮಾತನಾಡುವುದೇ ಬೇಡ ಎಂದರೆ ಹೇಗೆ ? ಎಂದು ಪ್ರಶ್ನಿಸಿದ್ದಾರೆ.
ವಿರೋಧ ಪಕ್ಷಗಳು ಪ್ರಶ್ನೆ ಮಾಡುತ್ತಾರೆ. ಅದೆಲ್ಲದಕ್ಕೂ ಆಡಳಿತ ಪಕ್ಷ ಉತ್ತರ ಕೊಡಬೇಕು. ಭದ್ರತಾ ಲೋಪಕ್ಕೆ ಭದ್ರತಾ ಸಿಬ್ಬಂದಿ ಕೊರತೆ ಕಾರಣ. ಶೇ.40ರಷ್ಟು ಅಧಿಕಾರಿಗಳೇ ಇಲ್ಲ. ಇದೆಲ್ಲ ಹೊರಗೆ ಬರುತ್ತೆ ಅನ್ನುವ ಕಾರಣಕ್ಕೆ ಚರ್ಚೆಗೆ ಅವಕಾಶ ನೀಡುತ್ತಿಲ್ಲ.
ಪ್ರಧಾನ ಮಂತ್ರಿಗೆ ಮಾಧ್ಯಮಗಳ ಮುಂದೆ ಬರುವ ತಾಕತ್ತು ಇಲ್ಲ. ಪ್ರಪಂಚದ ಮುಂದೆ ಭಾರತ ಬೆತ್ತಲಾಗುತ್ತಿದೆ. ಈ ಕುರಿತು ಬಾಯಿ ಕೂಡ ಬಿಡ್ತಿಲ್ಲ. ಇದು ತಪ್ಪು ಎಂದು ಕಿಡಿಕಾರಿದ್ದಾರೆ.