ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕ ಅಖಾಡದಲ್ಲಿ ಪ್ರಚಾರದ ಭರಾಟೆ ಶುರುವಾಗಿದ್ದು, ಡಿಕೆ ಸುರೇಶ್ ಕನಕಪುರದ ನಿವಾಸದಿಂದ ನೇರವಾಗಿ ಬನ್ನೇರುಘಟ್ಟ ವೃತ್ತಕ್ಕೆ ಆಗಮಿಸಿದ್ದಾರೆ. ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ ಮಾಡಿದ್ದು, ಬಳಿಕ ಬನ್ನೇರುಘಟ್ಟ ವೃತ್ತದಲ್ಲಿ ಕಾರ್ನರ್ ಮಿಟೀಂಗ್ ಮಾಡಿದ್ದಾರೆ.
ಇದೆ ವೇಳೆ ಮಾತನಾಡಿರುವ ಡಿಕೆ ಸುರೇಶ್, ಕೇಂದ್ರದವರು ನಿಮ್ಮ ಬಳಿ ತೆರಿಗೆ ವಸೂಲಿ ಮಾಡುತ್ತಿದ್ದಾರೆ. ನಾವು ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಿದ್ದೇವೆ. ಮಹಿಳೆಯರು ಚನ್ನಾಗಿರಲಿ, ಕುಟುಂಬ ಚೆನ್ನಾಗಿರಲಿ ಎಂದು ಗ್ಯಾರಂಟಿಗಳನ್ನ ಸರ್ಕಾರ ಕೊಟ್ಟಿದೆ. ಮಕ್ಕಳನ್ನ, ಕುಟುಂಬವನ್ನ ಪೋಷಣೆ ಮಾಡುವ ಕೈ ಬಲಪಡಿಸಿ ಎಂದು ಡಿಕೆ ಸುರೇಶ್ ಮತಯಾಚನೆ ಮಾಡಿದ್ದಾರೆ.
ಮಂಟಪ ಗ್ರಾಮ ಪಂಚಾಯತಿ ವ್ಯಾಪ್ತಿ ಬೇಗ್ಗಿಹಳ್ಳಿಯಲ್ಲಿ ಡಿಕೆ ಸುರೇಶ್ ಚುನಾವಣಾ ಪ್ರಚಾರ ಮಾಡಿದ್ದು, ಪ್ರಚಾರದ ವೇಳೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಕೊಟ್ಟಿದೆ. ಈ ಬಾಗದಲ್ಲಿ ಕಾವೇರಿ ನೀರು ಮನೆ ಮನೆ ತಲುಪಿಸುವ ಕೆಲಸ ಮಾಡುತ್ತೇವೆ. ಮೇಟ್ರೋ ಬಂದರೆ ನಿಮ್ಮ ಭೂಮಿಯ ಧರ ಹೆಚ್ಚಾಗಲಿದೆ. ಮೋದಿ ಗ್ಯಾರಂಟಿ ಏನು ಗೊತ್ತಾ..? ತೆರಿಗೆ ಟೆರರಿಸಂ ಮೋದಿ ಗ್ಯಾರಂಟಿ. ಚುನಾವಣೆ ಬಾಂಡ್ ನ ವಾಷಿಂಗ್ ಪೌಡರ್ ನಿರ್ಮಾಣ ಗ್ಯಾರಂಟಿ. ಪಕೋಡ ಮಾರೋದು ಗ್ಯಾರಂಟಿ. ಗುಜರಾತ್, ಯುಪಿಯಲ್ಲಿ ಪಕೋಡ ಮಾಡಬೇಕಾಗುತ್ತದೆ. ನಾನು ನಿಮ್ಮವನು, ಪ್ರತಿ ನಿತ್ಯ ನಿಮ್ಮ ಕಷ್ಟಕ್ಕೆ ಆಗುವವನು. ಸಂಸದನಾಗಿ ಅಲ್ಲ, ನಿಮ್ಮ ಸಹೋದರನಾಗಿ ಕೆಲಸ ಮಾಡುತ್ತೇನೆ ಎಂದು ಮತಯಾಚನೆ ಮಾಡಿದ ಡಿಕೆ ಸುರೇಶ್.