ಜಾರ್ಖಂಡ್‌ ನಲ್ಲಿ ಸರ್ಕಾರಿ ನೌಕರನ ಗುಂಡಿಟ್ಟು ಹತ್ಯೆ

Most read

ಜಾರ್ಖಂಡ್:  ರಾಜ್ಯ ಸರ್ಕಾರಿ ನೌಕರರೊಬ್ಬರನ್ನು ಆಗಂತುಕರು ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ಜಾರ್ಖಂಡ್‌ನ ಬೊಕರೊ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಕಶ್ಮರ್ ಪೊಲೀಸ್ ಠಾಣೆ ವ್ಯಾಪ್ತಿಯ ಮಧುಕಪುರ ಗ್ರಾಮದಲ್ಲಿರುವ ಮನೆಯಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

26 ವರ್ಷದ ಪಿಂಟು ನಾಯಕ್ ಮೃತ ನೌಕರ. ಅವರು ಹಜಾರಿಬಾಗ್‌ ಜಿಲ್ಲೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಪಿಂಟು ತಮ್ಮ ಕುಟುಂಬಸ್ಥರನ್ನು ಭೇಟಿ ಮಾಡಲು ಮನೆಗೆ ಬಂದಿದ್ದ ವೇಳೆ ಕೊಲೆ ಮಾಡಲಾಗಿದೆ ಎಂದು ಬೆರ್ಮೊ ಉಪವಿಭಾಗೀಯ ಪೊಲೀಸ್ ಅಧಿಕಾರಿ ಬಿ.ಎಸ್‌ ಸಿಂಗ್ ತಿಳಿಸಿದ್ದಾರೆ.

ಪಿಂಟು ನಾಯಕ್ ರಾತ್ರಿ ಊಟ ಮುಗಿಸಿ ಮಲಗಲು ತನ್ನ ಕೋಣೆಗೆ ಹೋಗುವಾಗ ಈ ದುರಂತ ನಡೆದಿದೆ. ಗುಂಡಿನ ಸದ್ದು ಕೇಳಿ ಬರುತ್ತಿದ್ದಂತೆ ಕೂಡಲೇ ಪಿಂಟು ಕೋಣೆಗೆ ಧಾವಿಸಿದೆ. ಅಲ್ಲಿ ಮಂಚದ ಮೇಲೆ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ ಎಂದು ಪಿಂಟು ತಂದೆ ಸಕುಲ್ ನಾಯಕ್ ಹೇಳಿದ್ದಾರೆ. ಕೂಡಲೇ ಪಿಂಟು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ದಾರಿ ಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ. ಈ ಪ್ರಕರಣ ಕುರಿತು ತನಿಖೆ ಪ್ರಗತಿಯಲ್ಲಿದೆ. ಬಡಾವಣೆಯ ಸ್ಥಳೀಯ ನಿವಾಸಿಗಳನ್ನು ವಿಚಾರಣೆ ಮಾಡಲಾಗುತ್ತಿದೆ. ಘಟನೆ ನಡೆದ ಸ್ಥಳದಿಂದ ಕೆಲವೊಂದು ಸಾಕ್ಷ್ಯ ಸಂಗ್ರಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

More articles

Latest article