ಕಾರ್ಮಿಕರಿಗೆ ಸಿಹಿಸುದ್ದಿ: ಆಟೊ ಸೆಟ್ಲ್‌ ಮೆಂಟ್‌ ಮೂಲಕ ಪಿಎಫ್‌ ಖಾತೆಯಿಂದ ಪಡೆಯುವ ಮೊತ್ತ ರೂ.5 ಲಕ್ಷಕ್ಕೆ ಹೆಚ್ಚಳ

Most read

ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ (ಇ ಪಿ ಎಫ್‌ ಒ) ಪಿಎಫ್‌ ಖಾತೆಯಿಂದ ಸದಸ್ಯರು ಪಡೆಯಬಹುದಾದ ಆಟೊ ಸೆಟ್ಲ್‌ ಮೆಂಟ್‌ ಮೊತ್ತದ ಪ‍್ರಮಾಣವನ್ನು ಹೆಚ್ಚಿಸಿ ಕೇಂದ್ರ ಕಾರ್ಮಿಕ ವ್ಯವಹಾರಗಳ ಇಲಾಖೆ ಆದೇಶ ಹೊರಡಿಸಿದೆ. ಕೇಂದ್ರ ಕಾರ್ಮಿಕ ವ್ಯವಹಾರಗಳ ಸಚಿವ ಮನಸುಖ್ ಮಾಂಡವೀಯ ಈ ವಿಷಯವನ್ನು ತಿಳಿಸಿದ್ದಾರೆ.

ಆಟೊ ಸೆಟ್ಲ್‌ ಮೆಂಟ್‌ ಮೊತ್ತದ ಪ‍್ರಮಾಣವನ್ನು ರೂ.1 ಲಕ್ಷದಿಂದ ರೂ.5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಹೊಸ ನಿಯಮ ಲಕ್ಷಾಂತರ ಇಪಿಎಫ್‌ಒ ಸದ್ಯರಿಗೆ ಅವರ ತುರ್ತು ಹಣಕಾಸಿನ ಅಗತ್ಯಗಳಿಗೆ ಸಹಾಯವಾಗಲಿದೆ ಎಂದು ಸಭೆಯ ನಂತರ ಸಚಿವರು ಮಾಂಡವೀಯ ಸಭೆಯ ನಂತರ ಹೇಳಿದರು.

ಆಟೊ ಸೆಟ್ಲ್‌ ಮೆಂಟ್‌ ಮೂಲಕ ಯಾವುದೇ ಕಚೇರಿಗೆ ಅಲೆದಾಟ ಇಲ್ಲದೇ ಆನ್‌ ಲೈನ್ ಮೂಲಕ ಮೂರು ದಿನಗಳೊಳಗೆ ಖಾತೆದಾರ ತನ್ನ ಪಿಎಫ್ ಖಾತೆಯಿಂದ ಬ್ಯಾಂಕ್‌ ಖಾತೆಗೆ ವರ್ಗಾಯಿಸಿಕೊಳ್ಳಬಹುದಾಗಿದೆ ಎಂದರು.

ಇಪಿಎಫ್‌ ಒ ನಲ್ಲಿ 7 ಕೋಟಿಗೂ ಅಧಿಕ ಪಿಎಫ್ ಖಾತೆಗಳಿವೆ. ತ್ವರಿತ ಹಾಗೂ ಪಾರದರ್ಶಕತೆಯ ಕಾರಣಕ್ಕೆ ಆಟೊ ಸೆಟ್ಲ್‌ ಮೆಂಟ್‌ ಜಾರಿಗೊಳಿಸಲಾಗಿದೆ ಎಂದು ಇಲಾಖೆ ಹೇಳಿದೆ.

ಕೋವಿಡ್-19 ಗೂ ಮೊದಲು ಪಿಎಫ್ ಖಾತೆದಾರರು ಅನಾರೋಗ್ಯದ ಕಾರಣಕ್ಕಾಗಿ ತಮ್ಮ ಪಿಎಫ್‌ ಖಾತೆಯಲ್ಲಿ ಹಣವನ್ನು ತೆಗೆದುಕೊಳ್ಳಲು ಸದಸ್ಯರು ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಿತ್ತು. ಈ ಕಷ್ಟವನ್ನು ತಪ್ಪಿಸಲು 2021ರಲ್ಲಿ ಆಟೊ ಸೆಟ್ಲ್‌ ಮೆಂಟ್‌ ಎಂಬ ಆನ್‌ ಲೈನ್ ವಿಧಾನದ ಮೂಲಕ ರೂ.50 ಸಾವಿರದಿಂದ ಗರಿಷ್ಠ ರೂ.1 ಲಕ್ಷದವರೆಗೆ ಹಣವನ್ನು ತೆಗೆದುಕೊಳ್ಳಲು ಅನುಕೂಲ ಕಲ್ಪಿಸಲಾಗಿತ್ತು. ಇದೀಗ ಆ ಮೊತ್ತವನ್ನು ರೂ.5 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಆರಂಭದಲ್ಲಿ ಅನಾರೋಗ್ಯದ ಕಾರಣಕ್ಕೆ ಮಾತ್ರ ಆಟೊ ಸೆಟ್ಲ್‌ ಮೆಂಟ್‌ನಲ್ಲಿ ಹಣ ಪಡೆಯಬಹುದಿತ್ತು. ಈಗ ವಿವಾಹ, ಮನೆ, ಶಿಕ್ಷಣ ಸೇರಿದಂತೆ ಯಾವುದೇ ಉದ್ದೇಶಕ್ಕೂ ಹಣ ಪಡೆಯಬಹುದಾಗಿದೆ.

2024–25 ನೇ ಆರ್ಥಿಕ ವರ್ಷದಲ್ಲಿ 2.34 ಕೋಟಿ ಕ್ಲೈಮ್‌ ಗಳನ್ನು ಆಟೊ ಸೆಟ್ಲ್‌ ಮೆಂಟ್‌ ಮೂಲಕ ಇತ್ಯರ್ಥಪಡಿಸಲಾಗಿದೆ. ಇದು 2023-24ನೇ ಸಾಲಿಗೆ ಹೋಲಿಸಿದರೆ ಶೇ. 161 ರಷ್ಟು ಹೆಚ್ಚು ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.

More articles

Latest article