ಖರ್ಜೂರದಲ್ಲಿಟ್ಟು  ಸಾಗಿಸುತ್ತಿದ್ದ 172 ಗ್ರಾಂ ಚಿನ್ನ ವಶ

Most read

ನವದೆಹಲಿ: ಖರ್ಜೂರದಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 172 ಗ್ರಾಂ ತೂಕದ ಚಿನ್ನವನ್ನು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ವಿಮಾನ ನಿಲ್ದಾಣದ ಗ್ರೀನ್ ಚಾನೆಲ್‌ನ ನಿರ್ಗಮನದಲ್ಲಿ ಶಂಕಿತ ವ್ಯಕ್ತಿಯೊಬ್ಬನನ್ನು ಅಧಿಕಾರಿಗಳು ಪರಿಶೀಲನೆಗೆ ಮಾಡಿದ್ದರು.  ಆಗ ಆತನಿಂದ ಚಿನ್ನ ಎನ್ನಲಾದ ವಿವಿಧ ಹಳದಿ ಲೋಹದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಆತ ಖರ್ಜೂರದೊಳಗೆ ಬಚ್ಚಿಟ್ಟು ಸಾಗಿಸುತ್ತಿದ್ದ ಎಂದು ಕಸ್ಟಮ್ಸ್‌ ಅಧಿಕಾರಿಗಳು ಹೇಳಿದ್ದಾರೆ.  

56 ವಯಸ್ಸಿನ ಆರೋಪಿಯು, SV-756 ವಿಮಾನದಲ್ಲಿ ಜೆಡ್ಡಾದಿಂದ ದೆಹಲಿಗೆ ಪ್ರಯಾಣಿಸಿದ್ದ ಎಂದು ತಿಳಿದು ಬಂದಿದೆ. ಗುಪ್ತಚರ ಮಾಹಿತಿ ಆಧರಿಸಿ ಆರೋಪಿಯನ್ನು ಪರಿಶೀಲನೆಗೆ ಒಳಪಡಿಸಿದ್ದರು. ಶಂಕಿತನ ಲಗೇಜ್‌ನ ಎಕ್ಸ್-ರೇ ಸ್ಕ್ರೀನಿಂಗ್ ಸಮಯದಲ್ಲಿ ಅನುಮಾನಾಸ್ಪದ ವಸ್ತುಗಳು ಕಂಡುಬಂದಿದ್ದವು. 172 ಗ್ರಾಂ ತೂಕದ ಹಳದಿ ಲೋಹದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

More articles

Latest article