ಪಿಂಚಣಿ ಕಾರ್ಡ್‌ ಮಾಡುವುದಾಗಿ ನಂಬಿಸಿ ಚಿನ್ನದ ಸರ ಅಪಹರಣ

ಫೋಟೋ ತೆಗೆಯಲು ಚಿನ್ನದ ಸರ ತೆಗೆಯುವಂತೆ ಹೇಳಿ ಕಳ್ಳತನ

ಕೋಲಾರ: ಪೆನ್ಷನ್ ಕಾರ್ಡ್ ಮಾಡಿಕೊಡುತ್ತೇನೆಂದು ನಂಬಿಸಿ ವೃದ್ಧ ಮಹಿಳೆಯ ಕತ್ತಿನಲ್ಲಿದ್ದ ಸುಮಾರು 35 ಗ್ರಾಂ ತೂಕದ ಬಂಗಾರದ ಚೈನ್ ಪಡೆದುಕೊಂಡು ಪರಾರಿಯಾಗಿರುವ ಘಟನೆ ಶ್ರೀನಿವಾಸಪುರ ತಾಲೂಕು ರಾಯಲ್ ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳಿಗ್ಗೆ 9 ಗಂಟೆಯಲ್ಲಿ ನಂಬುವಾರಿಪಲ್ಲಿ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗ್ರಾಮದಲ್ಲೆಲ್ಲಾ ಸುತ್ತಾಡಿ ಮನೆಯ ಬಳಿ ಇದ್ದ ಇಳಿ ವಯಸ್ಸಿನ ಗಿರಿಜಮ್ಮ ಎಂಬಾಕೆಯನ್ನು ಮಾತನಾಡುತ್ತಾ ನಿಮಗೆ ಪೆನ್ಷನ್ ಬರುತ್ತಲಿದೆಯೇ ಎಂದು ತೆಲುಗಿನಲ್ಲಿ ಮಾತನಾಡುತ್ತಾ ಮಹಿಳೆಯು ಇಲ್ಲ ಎಂದು ಹೇಳಿದ್ದಾರೆ.

ಆಗ ಮಹಿಳೆಯನ್ನು ಮನೆಯ ಒಳಗಡೆ ಕರೆದುಕೊಂಡು‌ ಹೋಗಿ ಆಧಾರ್ ಕಾರ್ಡ್ ಪೋಟೋ ತೆಗೆದುಕೊಳ್ಳಬೇಕು ಅದನ್ನು‌ ನೀವು ಕೈಯಲ್ಲಿ‌ ಹಿಡಿದುಕೊಳ್ಳಿ ಎಂದು ಹೇಳಿ ಆಕೆಯ ಕತ್ತಿನಲ್ಲಿ ಧರಿಸಿದ್ದ ಬಂಗಾರದ ಒಡವೆ ತೆಗೆಯಬೇಕೆಂದು ತಿಳಿಸಿ ಅದು ಕತ್ತಿನಲ್ಲಿದ್ದರೆ ಪೆನ್ಷನ್ ಬರುವುದಿಲ್ಲ ಎಂದು ಆಕೆಯನ್ನು ನಂಬಿಸಿ ಸಾಕ್ಷಿಗೆ ಇಬ್ಬರನ್ನು‌ ಕರೆದುಕೊಂಡು ಬನ್ನಿ ಎಂದು‌ ಹೇಳಿ ಮಹಿಳೆ ಹೊರಗಡೆ ಹೋದ‌ ತಕ್ಷಣ ಒಡವೆಯೊಂದಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

More articles

Latest article

Most read