ಬೆಂಗಳೂರಿನಲ್ಲಿ  ಖಾತಾ ಇಲ್ಲದ ಆಸ್ತಿಗಳಿಗೆ ಖಾತಾ ಮಾಡಿಕೊಳ್ಳಲು ಹೊಸ ಜಾಲತಾಣ: ಬಿಬಿಎಂಪಿ

Most read

ಬೆಂಗಳೂರು: ಬೆಂಗಳೂರು ನಗರದಲ್ಲಿ ಬಿಬಿಎಂಪಿ ಖಾತಾ ಹೊಂದಿರದ ಸುಮಾರು 5 ಲಕ್ಷಕ್ಕೂ ಹೆಚ್ಚು ಸ್ವತ್ತುಗಳು ಇರಬಹುದೆಂದು ನಿರೀಕ್ಷಿಸಲಾಗಿದ್ದು, ಈ ಸ್ವತ್ತುಗಳು ಇಲ್ಲಿಯವರೆಗೆ ಯಾವುದೇ ಖಾತಾ ಇಲ್ಲದೆ ಸಬ್ ರಿಜಿಸ್ಟ್ರಾರ್ ಕಛೇರಿಗಳಲ್ಲಿ ವಹಿವಾಟು ನಡೆಸುತ್ತಿದ್ದು, ಅವುಗಳಲ್ಲಿ ಹಲವು ಸ್ವತ್ತುಗಳು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿವೆ.

ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ರವರು ಈ 5 ಲಕ್ಷಕ್ಕೂ ಹೆಚ್ಚು ಸ್ವತ್ತುಗಳನ್ನು ಪಾಲಿಕೆಯ ತೆರಿಗೆ ವ್ಯಾಪ್ತಿಗೆ ತರುವ ಮತ್ತು ಅರ್ಹತೆ ಹೊಂದುವ ಎಲ್ಲಾ ಸ್ವತ್ತುಗಳಿಗೂ ಬಿಬಿಎಂಪಿ ವತಿಯಿಂದ ಹೊಸ ಖಾತಾ ನೀಡುವ ದೂರದೃಷ್ಟಿಯೊಂದಿಗೆ ಮುನ್ನಡೆದಿದ್ದಾರೆ. ಅದರಂತೆ, ಪಾಲಿಕೆಯು ಆನ್‌ಲೈನ್ ವ್ಯವಸ್ಥೆಯನ್ನು ಜಾರಿ ಮಾಡಿದ್ದು, ನಾಗರೀಕರುಗಳು ಹೊಸ ಖಾತಾ ಪಡೆಯುವ ಸಲುವಾಗಿ ತಮ್ಮ (i) ಮಾರಾಟ/ನೋಂದಣಿ ಪತ್ರ (ii) ಆಧಾರ್ (iii) ಇಸಿ ಪ್ರಮಾಣ ಪತ್ರ (iv) ಆಸ್ತಿ ಫೋಟೊ (v) ಬೆಸ್ಕಾಂ ಐಡಿಗಳನ್ನು ಸಲ್ಲಿಸಬಹುದಾಗಿದೆ.  ನೀವು ಬಿಬಿಎಂಪಿಯ ಖಾತೆಯನ್ನು ಹೊಂದಿರದಿದ್ದಲ್ಲಿ ದಯವಿಟ್ಟು ಆನ್‌ಲೈನ್ ಮೂಲಕ ಅರ್ಜಿಯನ್ನು ಬಿಬಿಎಂಪಿಯ ಜಾಲತಾಣವಾದ @ https://bbmp.karnataka.gov.in/newkhata ರಲ್ಲಿ ಸಲ್ಲಿಸಬಹುದು.

(ಸೂಚನೆ: ಒಂದು ವೇಳೆ ನೀವು ಈಗಾಗಲೇ ನಿಮ್ಮ ಸ್ವತ್ತಿಗಾಗಿ ಬಿಬಿಎಂಪಿಯಿಂದ ಪಡೆದಿರುವ ಕೈಬರಹ ಖಾತೆಗಾಗಿ ಇ-ಖಾತಾ ಪಡೆಯಲು ಬಯಸುತ್ತಿದ್ದರೆ ಅಂತಹ ಸಂದರ್ಭದಲ್ಲಿ ಹೊಸ ಖಾತಾ ಪಡೆಯಲು ಅರ್ಜಿಯನ್ನು ಸಲ್ಲಿಸಬಾರದು. ತಪ್ಪಿದಲ್ಲಿ ಅಂತಹವವರ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಹೊಣೆಗಾರರನ್ನಾಗಿ ಮಾಡಲಾಗುವುದು.) ಬಿಬಿಎಂಪಿಯ ಖಾತಾಗಾಗಿ ಯಾರನ್ನೂ ಭೇಟಿ ಮಾಡಬೇಡಿ ಮತ್ತು ನಿಮ್ಮ ಆನ್‌ಲೈನ್ ಅರ್ಜಿಯನ್ನು ಸರಾಗವಾಗಿ ಪ್ರಕ್ರಿಯೆಗೊಳಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ತಿಳಿಸಿದ್ದಾರೆ.

More articles

Latest article