ನಮ್ಮೂರಿನ ಜಾತ್ರೆಗಳಲ್ಲಿ ಕುಣಿಯುವ ಕೆಲಸ ಖಾಲಿ ಇದೆ : ಶಿವರಾಜ್ ಕುಮಾರ್ ಅವರನ್ನು ಟೀಕಿಸಿದ ಗೀತಾ ಸಹೋದರ..!

ಸೊರಬದ ಕುಟುಂಬ ಹಾಗೂ ದ್ವೇಷದ ರಾಜಕಾರಣ ಆಗಾಗ ಚರ್ಚೆಗೆ ಬರುತ್ತದೆ. ಬಂಗಾರಪ್ಪ ಅವರ ಮಕ್ಕಳಾದ ಮಧು ಬಂಗಾರಪ್ಪ ಹಾಗೂ ಕುಮಾರ ಬಂಗಾರಪ್ಪ ನಡುವೆ ಶೀತಲ ಸಮರ ಇನ್ನು ಮುಗಿದಂತೆ ಕಾಣಿಸುತ್ತಿಲ್ಲ. ಚುನಾವಣೆ ಬಂದಾಗ ಆ ಕೋಪ, ಮನಸ್ತಾಪ ಜೋರಾಗಿಯೇ ನಡೆಯುತ್ತದೆ. ಈಗಲೂ ಸೋಷಿಯಲ್ ಮೀಡಿಯಾದಲ್ಲಿ ಅದು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಪೋಸ್ಟ್ ಹಾಕಿದ್ದಾರೆ. ತಮ್ಮ ಜಗಳದಲ್ಲಿ ಇಲ್ಲಿ ಕುಮಾರ ಬಂಗಾರಪ್ಪ, ಶಿವರಾಜ್ ಕುಮಾರ್ ಅವರನ್ನು ಎಳೆದು ತಂದಿದ್ದಾರೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವ ರಾಜ್‍ಕುಮಾರ್ ಅವರು ಕಾಂಗ್ರೆಸ್ ನಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಈ ವೇಳೆ ಪತ್ನಿಯ ಪರವಾಗಿ ಶಿವಣ್ಣ ಪ್ರಚಾರ ಮಾಡಿದ್ದರು. ಪ್ರಚಾರದ ವೇಳೆ ಎಲ್ಲಿಯೂ ಇನ್ನೊಬ್ಬರ ವಿರೋಧ ಮಾತನಾಡಿರಲಿಲ್ಲ. ಕೇವಲ ತನ್ನ ಪತ್ನಿಗೆ ಒಂದು ಅವಕಾಶ ಕೊಡಿ ಎಂದಷ್ಟೇ ಕೇಳಿದ್ದರು. ಆದರೆ ಈಗ ಕುಮಾರ ಬಂಗಾರಪ್ಪ ಅವರು ಶಿವರಾಜ್ ಕುಮಾರ್ ಅವರ ಬಗ್ಗೆಯೂ ಲಘುವಾಗಿ ಮಾತನಾಡಿದ್ದಾರೆ. ‘ಶಿವರಾಜ್ ಕುಮಾರ್ ಅವರು ನಿರುದ್ಯೋಗಿಯಾಗಬೇಕಿಲ್ಲ. ನಮ್ಮ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಬಹುದು’ ಎಂದು ಪೋಸ್ಟ್ ಮಾಡಿದ್ದಾರೆ.

‘ನನ್ನ ತಂಗಿ ಸಿನಿಮಾ ಡಾನ್ ಆಗಿರುವುದರಿಂದ ಬೇಸರಕ್ಕೆ ಕಾರಣವಿಲ್ಲ. ದೊಡ್ಡಮನೆಯ ವ್ಯವಹಾರ ಸಾಕಷ್ಟಿರುತ್ತದೆ. ಬೇರೆಯವರಿಗೆ ಅವಕಾಶ ಸಿಗಲಾರದು. ಹೆದರಿಸುವ, ಬೆದರಿಸುವ, ಹುಷಾರ್ ಎನ್ನುವ ಮಾತುಗಳು ಏನಿದ್ದರೂ ಗಂಟಲೊಳಗೆ, ನಾಲ್ಕು ಗೋಡೆಗಳ ಒಳಗೆ, ಪಟಾಲಂ ಮುಂದೆ ಮಾತ್ರ ಚಾಲ್ತಿಯಲ್ಲಿರಬೇಕು. ದಿಕ್ಕು ಕೆಟ್ಟು ದಿಕ್ಕಾಪಾಲಾಗಿ ಹೋಗಿ, ಬೆಂಗಳೂರು ಸೇರಿಕೊಂಡವರಿಗೆ ಕೊನೆಯ ಎಚ್ಚರಿಕೆ, ನೀವೂ ಹಿಂತುರುಗಿ ಬರುವುದು ಕನಸಿನ ಮಾತು’ ಎಂದು ಸುಧೀರ್ಘವಾಗಿ ಬರೆದಿದ್ದಾರೆ.

More articles

Latest article

Most read