ದೇವನಹಳ್ಳಿಯಲ್ಲಿ ಗಾಂಜಾ ಮಾರಾಟಗಾರರ ಬಂಧನ

ದೇವನಹಳ್ಳಿ: ದ್ವಿಚಕ್ರ ವಾಹನದಲ್ಲಿ ಕುಳಿತೇ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ದೇವನಹಳ್ಳಿ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಠಾಣಾ ವ್ಯಾಪ್ತಿಯ ಎಂ.ಆರ್.ಲೇಔಟ್‌ನ ರಾಣಿ ಕ್ರಾಸ್ ಬಳಿ ಇಬ್ಬರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾವನ್ನಿಟ್ಟುಕೊಂಡು ಮಾರಾಟ ಮಾಡುತ್ತಿರುವ ಖಚಿತ ವರ್ತಮಾನ ಲಭ್ಯವಾಗಿತ್ತು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ 3 ಕೆ.ಜಿ 200 ಗ್ರಾಂ ಗಾಂಜಾ, 2 ಮೊಬೈಲ್ ಫೋನ್, 1 ತೂಕದ ಯಂತ್ರ ಹಾಗೂ 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.  

More articles

Latest article

Most read