“ಯುವಸಮುದಾಯಕ್ಕಾಗಿ ಗಾಂಧಿ” ಕಾರ್ಯಗಾರ: ಯುವಕರಿಂದ ಅರ್ಜಿ ಆಹ್ವಾನ

Most read

ಬೆಂಗಳೂರು: ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಆಶ್ರಯದಲ್ಲಿ ಮೇ ಕೊನೆಯ ವಾರದಲ್ಲಿ ಮೂರು ದಿನಗಳ ಯುವಸಮುದಾಯಕ್ಕಾಗಿ ಗಾಂಧಿ” ಕಾರ್ಯಗಾರ ವನ್ನು ಆಯೋಜಿಸಿದೆ. ಈ ಕಾರ್ಯಾಗಾರದಲ್ಲಿ 18 ರಿಂದ 35 ವರ್ಷದ ಯುವಕರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, 40 ಜನರಿಗೆ ಮಾತ್ರ ಅವಕಾಶವಿರುತ್ತದೆ.

ಈ ಕಾರ್ಯಗಾರದಲ್ಲಿ  ಗಾಂಧೀ ಸಾಹಿತ್ಯ, ದೃಶ್ಯ ಮಾಧ್ಯಮದಲ್ಲಿ ಗಾಂಧಿ ಅರಿವು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಗಾಂಧಿ ತತ್ವಗಳನ್ನು ಪ್ರಸಾರ ಮಾಡುವ ಬಗ್ಗೆ ತರಬೇತಿ ನೀಡಲಾಗುತ್ತದೆ. ಆಧುನಿಕ ಮಾಧ್ಯಮಗಳ ಸಾಧ್ಯತೆ, ಆಯ್ಕೆಗಳು ಮತ್ತು ಪ್ರಸಾರಗಳ ಪ್ರಯೋಗಗಳನ್ನು ಕುರಿತು ತರಬೇತಿ ನೀಡಲಾಗುತ್ತದೆ. ಹಿರಿಯ ಸಾಹಿತಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ಮಾಡಲಿದ್ದಾರೆ.

ಪೋಸ್ಟರ್‌ ಮಾಡುವುದು, ಆಡಿಯೋ, ವಿಡಿಯೋ ಎಡಿಟಿಂಗ್, ಕ್ಯಾಮೆರಾ ಬಳಕೆ, ಮತ್ತು ಯೂಟ್ಯೂಬ್ ಚಾನಲ್ ನಿರ್ವಹಣೆ ಬಗೆಗೆ ಮಾರ್ಗದರ್ಶನ ನೀಡಲಾಗುತ್ತದೆ. ಕಾರ್ಯಗಾರಕ್ಕೆ ಬರುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವಿರುತ್ತದೆ. ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ಮೂರು ದಿನಗಳ ವಸತಿಮತ್ತು ಊಟದ ವ್ಯವಸ್ಥೆ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ 9008149149 (ವಿಜಯ್ ಹನಕೆರೆ ನಿರ್ದೇಶಕರು ) ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬೇಕೆಂದು ಗಾಂಧೀ ಸ್ಮಾರಕ ನಿಧಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More articles

Latest article