‘ಗದ್ದರ್ 2’ ವೀಕ್ಷಿಸಲು ಜನರು ಸೇರಿದ್ದ ಹಳೆಯ ವೀಡಿಯೊವನ್ನು ‘ಧುರಂಧರ್ 2’ ವೀಕ್ಷಿಸಲು ಪ್ರೇಕ್ಷಕರು ಬಂದಿರುವ ಇತ್ತೀಚಿನ ದೃಶ್ಯಗಳೆಂದು ತಪ್ಪಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬಾಲಿವುಡ್ ನಟ ರಣವೀರ್ ಸಿಂಗ್ ನಟನೆಯ “ಧುರಂಧರ್: ದಿ ರಿವೆಂಜ್” ವೀಕ್ಷಿಸಲು ಥಿಯೇಟರ್ನಲ್ಲಿ ದೊಡ್ಡ ಜನಸಮೂಹ ಸೇರಿರುವ ವಿಡೀಯೋ ಎಲ್ಲೆಡೆ ಹಾರಿದಾಡುತ್ತಿದೆ. ಈ ಬಗ್ಗೆ ಪಿಟಿಐ ಸಂಸ್ಥೆ ಫ್ಯಾಕ್ಟ್ ಚೆಕ್ ಮಾಡಿದಾಗ ಗದ್ದರ್ 2 ಸಿನಿಮಾ ವೀಕ್ಷಿಸಲು ಜನರು ತೆರಳಿದ್ದ ದೃಶ್ಯ ಎಂದು ತಿಳಿದುಬಂದಿದೆ.
ಇದು ಹಳೆಯದಾದ ವಿಡಿಯೋ ಹಾಗೂ ದುರಂದರ್ ಸಿನಿಮಾಗೆ ಯಾವುದೇ ಸಂಬಂಧವಿಲ್ಲ. ಇದು ಆಗಸ್ಟ್ 2023 ರ ಹಿಂದಿನದು ಮತ್ತು ಸನ್ನಿ ಡಿಯೋಲ್ ಅಭಿನಯದ “ಗದ್ದರ್ 2” ಪ್ರದರ್ಶನಕ್ಕಾಗಿ ಬೆಂಗಳೂರಿನ ಥಿಯೇಟರ್ನಲ್ಲಿ ಜನಸಮೂಹ ಸೇರಿರುವುದನ್ನು ತೋರಿಸುತ್ತದೆ. ಈ ವಿಡಯೋ ಜನರನ್ನು ದಾರಿ ತಪ್ಪಿಸಲು ಹಂಚಿಕೊಳ್ಳಲಾಗಿದೆ ಎನ್ನಲಾಗಿದೆ.

