ಬೆಂಗಳೂರು: ಯುವತಿಯರ ಜತೆ ಫ್ರೆಂಡ್ ಶಿಪ್ ಬೆಳಸುವ ಆಪ್ frnd app ಪ್ರಚಾರಕ್ಕೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ಭಾವಚಿತ್ರ ಬಳಕೆಯಾಗಿದೆ. ಸಚಿವ ಜಮೀರ್ ಅವರು ಮೊಬೈಲ್ ನಲ್ಲಿ ಮಾತನಾಡುತ್ತಿರುವ ಚಿತ್ರವನ್ನು ಬಳಸಲಾಗಿದೆ. ಸಚಿವರ ಫೋಟೋವನ್ನು ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ನಾನು ದಿನಪೂರ್ತಿ frnd app ನಲ್ಲಿದ್ದು ಹುಡುಗಿಯರೊಂದಿಗೆ ಫ್ರೆಂಡ್ ಶಿಪ್ ಮಾಡುವುದು ಮತ್ತು ಇದೆಲ್ಲವೂ ಕೇವಲ 9 ರೂಗೆ ಪ್ರಾರಂಭ ಎಂದೂ ಮುದ್ರಿಸಲಾಗಿದೆ. ಒಟ್ಟಾರೆ ಸಚಿವರ ಭಾವಚಿತ್ರವನ್ನು ಆಪ್ ಕಂಪನಿಯೇ ದುರ್ಬಳಕೆ ಮಾಡಿಕೊಂಡಿದೆಯೇ ಅಥವಾ ಕಿಡಿಗೇಡಿಗಳು ಮುದ್ರಿಸಿದ್ದಾರೆಯೇ ಎನ್ನುವುದು ತನಿಖೆಯಿಂದ ಮಾತ್ರ ತಿಳಿದು ಬರಲಿದೆ.