ಬೆಂಗಳೂರು: 70 ವರ್ಷ ಮೀರಿದ ಸರ್ಕಾರಿ ನಿವೃತ್ತ ನೌಕರರು, ಕುಟುಂಬ ಪಿಂಚಣಿದಾರರು ಹಾಗೂ ಹಿರಿಯ ನಾಗರೀಕರಿಗೆ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ಆಯುಷ್ಮಾನ್ ಭಾರತ ಆರೋಗ್ಯ ಭಾಗ್ಯ ಯೋಜನೆಗೆ ಸಂಬಂಧಿಸಿದ ಕಾರ್ಡ್ ಮಾಡಿಕೊಡಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ. ಎಲ್.ಬೈರಪ್ಪ ಅವರು ತಿಳಿಸಿದ್ದಾರೆ.
ವೈಯಾ ವಿಕಾಸ ಸಂಸ್ಥೆಯೊಂದಿಗೆ ಜ.10 ರಂದು ಬೆಳಿಗ್ಗೆ 10 ಗಂಟೆಗೆ ಕಬ್ಬನ್ ಪಾಕ್ ನ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಲಾಗಿದ್ದು, ನಿವೃತ್ತ ನೌಕರರು ಆಧಾರ್ ಕಾರ್ಡ್‌ನೊಂದಿಗೆ ಭಾಗವಹಿಸಿ ಇದರ ಸೌಲಭ್ಯವನ್ನು ಪಡೆದು ಕೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.