ನಾಯಕತ್ವಕ್ಕೆ ಮುನ್ನುಡಿ ಬರೆದಿದ್ದೇ ನನ್ನೂರು – ಕೆ. ಟಿ. ಕೃಷ್ಪಪ್ಪ…

Most read

ನಾನು ಆಡಿ ಬೆಳೆದು ಉತ್ತುಂಗ ಸ್ಥಾನದಲ್ಲಿ ಬಾಳಿ ಬದುಕಿ ತನ್ನ ಕೈಲಾದಷ್ಟು ಸಹಾಯವನ್ನು ಮಾಡುವಂತಹ ಮನೋಭಾವವನ್ನು ಬೆಳೆಸಿ ನಾಯಕತ್ವದ ಗುಣವನ್ನು ಚಿಕ್ಕಂದಿನಿಂದಲೂ ಬೆಳೆಸಿದ ಈ ನನ್ನೂರಿನ ಮಣ್ಣಿಗೆ ನಾನೆಂದಿಗೂ ಚಿರ ಋಣಿಯಾಗಿರುತ್ತೇನೆ ಎಂದು ಸನ್ಮಾನ ಸ್ವೀಕರಿಸಿದ ಸಂಧರ್ಭದಲ್ಲಿ ಶ್ರೀಯುತ ಕೆ.ಟಿ. ಕೃಷ್ಣಪ್ಪನವರು ತಮ್ಮ ನುಡಿನಮನವನ್ನು ಸಲ್ಲಿಸಿದರು.

ವಿದ್ಯಾವರ್ಧಕ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಹಾಗು ಕೆ ಎಚ್ ರಾಮಯ್ಯ ವಿದ್ಯಾರ್ಥಿ ನಿಲಯದ ನಿಲಯಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಯುತ ಕೆ ಟಿ ಕೃಷ್ಣಪ್ಪ ಹಾಗು ಅವರ ಧರ್ಮಪತ್ನಿ ಶ್ರಿಮತಿ ಸುಜಾತ ಟಿ.ವಿ ಯವರನ್ನು ಕೊತ್ತನಹಳ್ಳಿ ಗ್ರಾಮಸ್ಥರು ಸಮ್ಮುಖದಲ್ಲಿ ಅವರ ಅಪಾರ ಅಭಿಮಾನಿವರ್ಗದವರು ಸೇರಿ
ಸನ್ಮಾನಿಸಲಾಯಿತು.

ಮದ್ದೂರು ತಾಲ್ಲೂಕಿನ ಕೊತ್ತನಹಳ್ಳಿ ಗ್ರಾಮದ ಶ್ರೀಮಾನ್ ತಮ್ಮೇಗೌಡರು ಮತ್ತು ಶ್ರೀಮತಿ ಹೊಂಬಮ್ಮನವರ ಐದು ಮಕ್ಕಳಲ್ಲಿ ಕಿರಿಯವರು ಕೃಷ್ಣಪ್ಪ, ಮೈಸೂರಿಗೆ ಬಂದು ಬಿ.ಬಿ.ಎಂ., ಬಿ.ಲಿಬ್., ಎಂ.ಲಿಬ್. ಎಂಬ ಮೂರು ಪದವಿಗಳನ್ನು ಗಳಿಸಿದರು. ಒಮ್ಮೆ ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರೂ ಆಗಿ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿದ್ದಾರೆ. ಅವರೇ ಓದಿದ ವಿದ್ಯಾವರ್ಧಕ ಕಾಲೇಜಿನಲ್ಲಿ ಗ್ರಂಥ ಪಾಲಕರಾಗಿ 33 ವರ್ಷ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿದ್ದಾರೆ. ಈ ನಿವೃತ್ತರಾದ ಶ್ರೀಯುತರಿಗೆ ನಮ್ಮ ಊರಿನ ಅಭಿಮಾನಿ ಹಾಗು ಪ್ರೀತಿ ಪಾತ್ರರು ಸೇರಿ ಅಭಿನಂದನಾ ಕಾರ್ಯಕ್ರಮವನ್ನು ನಡೆಸಿ ಅವರ ಅಮೂಲ್ಯ ಸೇವೆಯನ್ನು ಸ್ಮರಿಸಿದರು.

ಕೆ.ಹೆಚ್. ರಾಮಯ್ಯ ವಿದ್ಯಾರ್ಥಿ ನಿಲಯಕ್ಕೆ ತಮ್ಮ ಮನೆಯನ್ನು ದಾನ ಕೊಟ್ಟ ಸಾಹುಕಾರ್ ಚನ್ನಯ್ಯ ಅವರು. ಈ ಕಟ್ಟಡವನ್ನು ನೀಡುವುದಕ್ಕೆ ಪ್ರೇರಕರಾದ ಶ್ರೀಮಾನ್ ಗುಚ್ಚೇಗೌಡರು ಮತ್ತು ಶ್ರೀ ಹೆಚ್.ಸಿ.ದಾಸಪ್ಪ ದಂಪತಿಗಳ ಸಹಕಾರದಿಂದ ಆರಂಭವಾದ ಕೆ.ಹೆಚ್.ರಾಮಯ್ಯ ವಿದ್ಯಾರ್ಥಿನಿಲಯ ಶ್ರೀ ಪಿ.ಎಂ. ಚಿಕ್ಕಬೋರಯ್ಯನವರ ಕರ್ಣಧಾರತ್ವದಲ್ಲಿ ಗ್ರಾಮೀಣ ಬಡ ಮಕ್ಕಳ ಆಸರೆ ಧಾಮವಾಗಿ ನಡೆದುಕೊಂಡು ಬಂದಿತು. ಅವರ ಸಾಮೀಪ್ಯ, ಸಹವಾಸ ದೊರಕಿ ಕೃಷ್ಣಪ್ಪನವರು ಕೆ.ಹೆಚ್.ರಾಮಯ್ಯ ವಿದ್ಯಾರ್ಥಿನಿಲಯದ ನಿಲಯ ಪಾಲಕರಾದ ಮೇಲೆ ಅದರ ಧರ್ಮದರ್ಶಿಗಳಾಗಿ ನಿಡುಗಾಲ ನಡೆಸಿಕೊಂಡು ಬಂದಿದ್ದಾರೆ, ಕೆ.ಹೆಚ್. ರಾಮಯ್ಯನವರ ಹೆಸರಿನಲ್ಲಿ, ಆ ನಿಲಯದ ನೆಲದ ಮಣ್ಣಲ್ಲಿ, ಆ ನಿಲಯದ ಸ್ಥಾಪಕರ ಸಂಕಲ್ಪದಲ್ಲಿ ಅದೇನೂ ಮಹಿಮೆ, ಸತ್ತ್ವ ಇದೆಯೋ ಸಮಾಜದ ಉನ್ನತೋನ್ನತ ವ್ಯಕ್ತಿಗಳು ಅಲ್ಲಿ ರೂಪುಗೊಂಡಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ಸನ್ಮಾನ ಸಮಾರಂಭದಲ್ಲಿ ಕೃಷ್ಣಪ್ಪರವರ ಬಾಲ್ಯ ಜೀವನ, ಶಿಕ್ಷಣ ಹಾಗು ಅವರ ಹೋರಾಟವನ್ನು ಎಲ್ಲರಿಗೂ ಪರಿಚಯ ಮಾಡಿಕೊಟ್ಟರು. ನಂತರ ಕೊತ್ತನಹಳ್ಳಿ ಗ್ರಾಮದ ಕೃಷ್ಫಪ್ಪವರ ಒಡನಾಡಿಗಳು ಅವರ ಬಗ್ಗೆ ಇದ್ದ ಅಭಿಮಾನದ ನುಡಿಗಳನ್ನು ಸ್ಮರಿಸಿದರು.


ಈ ಅಭಿನಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಸೇನಾನಿಗಳಾದ ಮಲ್ಲರಾಜುರವರು, ಊರಿನ ಹಿರಿಯರಾದ ಶ್ರಿ ಗಿರಿಮಲ್ಲೇಗೌಡರವರು, ಶ್ರೀ.ಕೆ. ದಿವಾಕರರವರು ಗ್ರಾಮಪಂಚಾಯತ್ ಸದಸ್ಯರಾದ ಶ್ರೀ ರಘುನಂದನ್ ರವರು, ಶ್ರೀಮತಿ.ಜಯರತ್ನರವರು, ಮತ್ತು ಶ್ರೀ ಮಹೇಶ್, ಶ್ರೀ ಕೆ.‌ಎಲ್.ಕೃಷ್ಣೇಗೌಡರವರು, ಶ್ರೀ ಕೃಷ್ಣೇಗೌಡರವರು ಶ್ರೀ ಪುಟ್ಟಮಾದಪ್ಪರವರು ಶ್ರೀ ಪ್ರಕಾಶ್ ರವರು, ಶ್ರೀ ಕೆಂಪಬೋರಯ್ಯರವರು, ಶ್ರೀ ಕೆ. ಬಿ. ಮಲ್ಲಿಕಾರ್ಜುನ್ ರವರು ಹಾಗು ಅವರ ಅಪಾರ ಅಭಿಮಾನಿ ವರ್ಗ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

More articles

Latest article