ಬಾರಾಂಡಹಳ್ಳಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆಗೆ ಯತ್ನ : 9 ಮಂದಿ ವಿರುದ್ಧ ಎಫ್‌ಐಆರ್‌

ಕೋಲಾರ : ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ತಾಲೂಕಿನ ಬಾರಾಂಡಹಳ್ಳಿ ಪೌರ ಕಾರ್ಮಿಕರ ವಸತಿ ನಿರ್ಮಾಣಕ್ಕಾಗಿ ಮೀಸಲಾಗಿಟ್ಟಿದ್ದ ಸ್ಥಳಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಭೂ ಕಬಳಿಕೆ ಮಾಡಲು ಯತ್ನಿಸಿದ್ದ 9 ಮಂದಿಯ ವಿರುದ್ಧ ನಗರದ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಶಾಂತಿನಗರ ನಿವಾಸಗಳಾದ ಲಕ್ಷ್ಮಮ್ಮ (60), ಶಕುಂತಲ (30), ಶಶಿಧರ(44), ಆನಂದ (53) ಹಾಗೂ ಧರ್ಮರಾಯ ನಗರದ ಹರೀಶ್ ಕುಮಾರ್ ( 46) ಮತ್ತು ಬೆಂಗಳೂರಿನ ಕೆ ಆರ್ ಪುರಂ ನಿವಾಸಿಗಳಾದ ಗಾಯತ್ರಿ (36), ಮೋಹನ್ (46) ಅಲ್ಲದೆ ಖಾಸಗಿ ಸರ್ವೆಯರುಗಳಾದ ಮಹೇಶ್ ಬಾಬು ಹಾಗೂ ರಾಮಕೃಷ್ಣಪ್ಪ ಎಂಬುವವರ ಮೇಲೆ ಪೌರ ನೌಕರರ ಗೃಹ ನಿರ್ಮಾಣ ಸಂಘದ ಅಧ್ಯಕ್ಷ ವಿ ಮೋಹನ್ ನಗರಸಭೆಯು ಗಲ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವುದರಿಂದ ದೂರು ನೀಡಿದ್ದು ಅವರು ನೀಡಿದ ದೂರಿನ ಮೇರೆಗೆ ದೂರಿನ ಮೇರೆಗೆ ಎಫ್ ಐ ಆರ್ ದಾಖಲಾಗಿದೆ.

ಬಾರಂಡಹಳ್ಳಿಯಲ್ಲಿ ಸರ್ವೇ ನಂಬರ್ 6ರ ಪೈಕಿ 3 ಎಕರೆ 29 ಗುಂಟೆ ಹಾಗೂ ಸರ್ವೇ ನಂಬರ್ ಐದರ ಪೈಕಿ ಒಂದು ಎಕರೆ 17 ಗುಂಟೆ ಜಮೀನನ್ನು ಪೌರ ನೌಕರರ ಗೃಹ ನಿರ್ಮಾಣದ ಸಲುವಾಗಿ ಅಂದಿನ ಅಧ್ಯಕ್ಷ ಟಿ ವೆಂಕಟೇಶ್ ರವರ ಹೆಸರಿಗೆ ಕ್ರಯ ಮಾಡಿಸಲಾಗಿತ್ತು. ಇದಕ್ಕೆ ಲೆಕ್ಕ ಪರಿಶೋಧಕರಿಂದ ಆಕ್ಷೇಪ ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷ ವೆಂಕಟೇಶ್ ರವರೇ 227 ಮಂದಿ ಪೌರ ಕಾರ್ಮಿಕರಿಗೆ ಹಕ್ಕುಪತ್ರವನ್ನು ವಿತರಿಸಿದ್ದರು. ನಂತರ 2008ರಲ್ಲಿ ಅಧ್ಯಕ್ಷ ವೆಂಕಟೇಶ್ ಮೃತಪಟ್ಟಿದ್ದು ಅವರ ಪತ್ನಿ ಲಕ್ಷ್ಮಮ್ಮ ಹಾಗೂ ಅವರ ಮಕ್ಕಳು ಅಲ್ಲದೆ ಜವಾನ ಆನಂದ್ ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿ ಸಿದ್ದಾರಲ್ಲದೆ ಖಾತೆ ಬದಲಾವಣೆಯನ್ನು ಸಹ ಮಾಡಿಕೊಂಡಿದ್ದರು.

ನಂತರ 2025 ರಲ್ಲಿ ನಂತರ ಸದರಿ ಜಮೀನಿ ಗೆ 11( ಎ) ನಕ್ಷೆಯನ್ನು ಮೃತಪಟ್ಟಿದ್ದ ವೆಂಕಟೇಶ್ ರವರ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದು ಅದಕ್ಕೆ ಜವಾನ ಆನಂದ್ ರವರ ಮೊಬೈಲ್ ನಂಬರನ್ನು ಸಹ ನೀಡಲಾಗಿತ್ತು. ಈ ಅಕ್ರಮ ಪರ ಬಾರೆ ಪ್ರಕರಣಕ್ಕೆ ಪೌರ ಕಾರ್ಮಿಕರ ನೌಕರರ ಸಂಘದ ಅಧ್ಯಕ್ಷ ಮೋಹನ್ ಮತ್ತಿತರರು ನ್ಯಾಯಾಲಯದಲ್ಲಿ ತಡೆಯಾಗ್ನೆಯನ್ನು ಕೋರಿದ್ದು ಸದರಿ ನ್ಯಾಯಾಲಯವು ತಡೆಯಜ್ಞೆಯನ್ನು ನೀಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶ ನೀಡಲಾಗಿದೆ.

More articles

Latest article

Most read