ಬೆಂಗಳೂರು: ಹಣಕಾಸಿನ ವಿಷಯಕ್ಕೆ ಪರಿಚಿತರಿಂದಲೇ ಲಾರಿ ಚಾಲಕನೊಬ್ಬ ಕೊಲೆಯಾಗಿರುವ ಪ್ರಕರಣ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೆಗಡೆನಗರದ ಅಕಾಶವಾಣಿ ಲೇಔಟ್ ನಲ್ಲಿ ನಡೆದಿದೆ. ಸಂಪಿಗೆಹಳ್ಳಿ ನಿವಾಸಿ ಸೈಯದ್ ಮೆಹಬೂಬ್ (42) ಹತ್ಯೆಗೀಡಾದ ಚಾಲಕ. ಕೊಲೆ ಮಾಡಿರುವ ತಮಿಳುನಾಡು ಮೂಲದ ಖಾಲಿಯಾ ಮತ್ತು ಸ್ಥಳೀಯ ನಿವಾಸಿ ರಾಜು ಅವರಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೆಲವು ವರ್ಷಗಳಿಂದ ಸೈಯದ್ ಮೆಹಬೂಬ್, ಎಂ-ಸ್ಯಾಂಡ್, ಜೆಲ್ಲಿ ಮತ್ತು ಮರಳು ವ್ಯಾಪಾರ ಮಾಡುತ್ತಿದ್ದರು. ಖಾಲಿಯಾ ಟಾಟಾ ಏಸ್‌ಗೆ ಜೆಲ್ಲಿ, ಮರಳು ತುಂಬುವ ಮತ್ತು ಇಳಿಸುವ ಕೆಲಸ ಮಾಡುತ್ತಿದ್ದ. ರಾಜು ಸಹ ಜೆಲ್ಲಿ ಕಲ್ಲು ಮಾರಾಟ ವ್ಯಾಪಾರ ಮಾಡುತ್ತಿದ್ದ. ಸ್ವಲ್ಪ ದಿನಗಳ ಹಿಂದೆ ಸೈಯದ್ ಮೆಹಬೂಬ್ ಮತ್ತು ಆರೋಪಿಗಳ ನಡುವೆ ಹಣಕಾಸಿನ ವಿಚಾರಕ್ಕೆ ಕಲಹ ನಡೆದಿತ್ತು ಎಂದು ಇವರ ಸ್ನೇಹಿತರು ಹೇಳಿಕೆ ನೀಡಿದ್ದಾರೆ.
ರಾಜು ಕರೆ ಮಾಡಿ ಮೆಹಬೂಬ್ ಅವರನ್ನು ಬಾಡಿಗೆ ಇದೆ ಎಂದು ಅಂಗಡಿಗೆ ಕರೆಸಿಕೊಂಡಿದ್ದಾನೆ. ಅಲ್ಲಿ ಮೂವರ ನಡುವೆ ಹಣಕಾಸಿನ ವಿಚಾರಕ್ಕೆ ಮತ್ತೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ರಾಜು ಮತ್ತು ಖಾಲಿಯಾ ಇಬ್ಬರೂ ಮೆಹಬೂಬ್ ಅವರ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಬಳಿಕ ಸ್ಥಳೀಯರು ಮೆಹಬೂಬ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರ