ಬೆಂಗಳೂರು; ಫೆಂಗಲ್ ಚಂಡಮಾರುತ ತಮಿಳುನಾಡಿನಲ್ಲಿ ಅಬ್ಬರಿಸುತ್ತಿದ್ದು ಇದು ಬೆಂಗಳೂರಿನ ಮೇಲೂ ಪರಿಣಾಮ ಬೀರಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್ ಇರುವುದರಿಂದ ಶಾಲಾ ಕಾಲೇಜುಗಳಿಗೆ ರಜೆ
ಘೋಷಣೆ ಮಾಡಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ. ಬೆಂಗಳೂರು ನಗರದಲ್ಲಿ ಭಾನುವಾರ 4.5 ಮಿಮೀಯಷ್ಟು ಮಳೆಯಾಗಿದೆ. ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಭಾನುವಾರದ ರಜೆಯ ಮೋಜು ಅನುಭವಿಸುವವರಿಗೆ ನಿರಾಶೆ ಮೂಡಿದ್ದು ಸುಳ್ಳಲ್ಲ.
ಫೆಂಗಲ್ ಚಂಡಮಾರುತದ ಪರಿಣಾಮ ಭಾನುವಾರ ರಾಜ್ಯ ರಾಜಧಾನಿ ಬೆಂಗಳೂರು ನಗರದಾದ್ಯಂತ ಭಾನುವಾರದಿಂದಲೇ ಮಳೆ ಆರಂಭವಾಗಿದೆ. ದಿನವಿಡೀ ಅಲ್ಲಲ್ಲಿ ಮಳೆಯಾಗುತ್ತಲೇ ಇತ್ತು. ಭಾನುವಾರ ಬೆಳಗ್ಗೆ ಮೋಡ ಕವಿದ ವಾತಾವರಣವಿದ್ದರೆ ಮಧ್ಯಾಹ್ನದ ವೇಳೆಗೆ ಮಳೆ ಆರಂಭವಾಗಿತ್ತು. ಕೆಲವೊಮ್ಮೆ ಜಿಟಿಜಿಟಿ ಮತ್ತೆ ಕೆಲವೊಮ್ಮೆ ಜೋರು ಮಳೆಯಾಗಿದೆ. ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಣವಾಗಿತ್ತು. ಶೇಷಾದ್ರಿಪುರ, ಮಲ್ಲೇಶ್ವರ. ರಾಜರಾಜೇಶ್ವರಿ ನಗರ, ಯಶವಂತಪುರ, ವಿಧಾನಸೌಧ, ಶಾಂತಿನಗರ, ಎಂಜಿ ರಸ್ತೆ ಸುತ್ತಮುತ್ತ ಉತ್ತಮ ಮಳೆಯಾಗಿದೆ.
ಇನ್ನೂ ಕೆಲವು ಭಾಗಗಳಲ್ಲಿ ರಾತ್ರಿಯಿಡೀ ಮಳೆಯಾಗಿದೆ. ಪೀಣ್ಯ ದಾಸರಹಳ್ಳಿಯಲ್ಲಿ ರಾತ್ರಿಯೆಲ್ಲಾ ಮಳೆಯಾಗಿದೆ. ಇಂದೂ ಸಹ ಮೆಂಗಳುರಿನ ವಿವಿಧ ಭಾಗಗಳಲ್ಲಿ ಮಳೆಯಾಗುವ ಸಾದ್ಯತೆಗಳಿವೆ.