ಖ್ಯಾತ ಪತ್ರಕರ್ತ, ಪದ್ಮಭೂಷಣ ಪುರಸ್ಕೃತ ಟಿ ಜೆ ಎಸ್ ಜಾರ್ಜ್ ನಿಧನ; ಮುಖ್ಯಮಂತ್ರಿ ಸಿದ್ದರಾಮಯ್ಯ ಶೋಕ

Most read

ಬೆಂಗಳೂರು: ಖ್ಯಾತ ಪತ್ರಕರ್ತ ಟಿ ಜೆ ಎಸ್ ಜಾರ್ಜ್ ಅವರು ಇಂದು ನಿಧನ ಹೊಂದಿದ್ದಾರೆ. ಅವರಿಗೆ 97 ವರ್ಷವಾಗಿತ್ತು. ಮೇ 7, 1928ರಂದು ಕೇರಳದಲ್ಲಿ ಜನಿಸಿದ ಅವರು ವಿವಿಧ ಪತ್ರಿಕೆಗಳಲ್ಲಿ ಸಂಪಾದಕ, ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದರು. ಇಂಗ್ಲಿಷ್ ಪತ್ರಿಕೋದ್ಯಮದ ದೊಡ್ಡ ಆಲದಮರ ಎಂದೇ ಹೆಸರು ಗಳಿಸಿದ್ದರು. ಕೇಂದ್ರ ಸರ್ಕಾರ ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.

ಅನೇಕ ಪ್ರಸಿದ್ಧ ಪತ್ರಿಕೆಗಳಲ್ಲಿ ಸಂಪಾದಕರಾಗಿ ಅಂಕಣಕಾರರಾಗಿ ದೇಶವಿದೇಶಗಳಲ್ಲಿ ಹೆಸರು ಮಾಡಿದ್ದ ಟಿ ಜೆ ಎಸ್ ಜಾರ್ಜ್ ತಮ್ಮ ನೇರ, ನಿಷ್ಠುರ ನಿಲುವುಗಳಿಗೆ ಹೆಸರಾಗಿದ್ದರು. ಚಿಕಿತ್ಸಕ ದೃಷ್ಟಿಯಿಂದ ಸಮಾಜವನ್ನು ನೋಡುತ್ತಾ ಬರೆಯುತ್ತಿದ್ದದ್ದು ಇವರ ವಿಶೇಷವಾಗಿತ್ತು.

ದೇಶ, ವಿದೇಶದ ಹಲವು ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ ಟಿಜೆಎಸ್ ಜಾರ್ಜ್ ಅವರು ತಮ್ಮ ಇಳಿವಯಸ್ಸಿನಲ್ಲೂ ತಪ್ಪದೇ ಅಂಕಣ ಬರೆಯುತ್ತಿದ್ದರು. ಜಾರ್ಜ್‌ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದರು ಎನ್ನುವುದು ಮತ್ತೊಂದು ಹೆಮ್ಮೆಯ ವಿಷಯವಾಗಿತ್ತು.

ಅವರ ನಿಧನದಿಂದ ಪತ್ರಿಕೋದ್ಯಮದ ಒಂದು ಶ್ರೇಷ್ಠ ಚೈತನ್ಯ ಕಣ್ಮರೆಯಾದಂತಾಗಿದೆ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

More articles

Latest article