ಕೋಲಾರ. ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುಪ್ಪಂಪಲ್ಲಿಯ ಬಾವಿಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಇಬ್ಬರು ಬಾಲಕಿಯರ ಸಾವಿಗೆ ಕೌಟುಂಬಿಕ ಸಮಸ್ಯೆಗಳೇ ಕಾರಣ ಎಂದು ತಿಳಿದು ಬಂದಿದೆ.
ನಾಲ್ಕು ದಿನಗಳ ಹಿಂದೆ 13 ವರ್ಷದ ಧನ್ಯಭಾಯಿ ಹಾಗೂ ಚೈತ್ರಾಭಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನಿಖೆಯ ನಂತರ ಇಬ್ಬರ ಕುಟುಂಬಗಳ ಸಮಸ್ಯೆಗಳೇ ಕಾರಣ ಎನ್ನಲಾಗಿದೆ. ಈ ಬಾಲಕಿಯರ ಜಾಮಿಟರಿ ಬಾಕ್ಸ್ ನಲ್ಲಿದ್ದ ಡೆತ್ ನೋಟ್ ನಲ್ಲಿ ಕಾರಣವನ್ನು ಬರೆದಿಟ್ಟಿದ್ದಾರೆ.
ಚೈತ್ರಾಬಾಯಿ ಹಾಗೂ ಧನ್ಯಬಾಯಿ ಇಬ್ಬರೂ ನೆರೆಹೊರೆಯ ನಿವಾಸಿಗಳು. ಒಬ್ಬಾಕೆಯ ತಾಯಿ ಈಗಾಗಲೇ ಸಾವನ್ನಪ್ಪಿದ್ದು ತಂದೆ ಸರಿಯಾಗಿ ಗಮನ ಹರಿಸುತ್ತಿರಲಿಲ್ಲ. ಮತ್ತೊಬ್ಬ ಬಾಲಕಿಯ ಮಲತಾಯಿ ಅಷ್ಟಾಗಿ ಗಮನ ಹರಿಸುತ್ತಿರಲಿಲ್ಲ. ಹಾಗಾಗಿ ಇಬ್ಬರೂ ಪರಸ್ಪರ ಮಾತನಾಡಿಕೊಂಡು ಶಾಲೆಯಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ ಮುಗಿಸಿಕೊಂಡು ಬಂದು ಆಟವಾಡುತ್ತಿದ್ದರು. ನಂತರ ಬಹಿರ್ದೆಸೆಗೆ ಹೋಗುವುದಾಗಿ ತಿಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.