Saturday, July 27, 2024

ಮುಸ್ಲಿಂ ದ್ವೇಷದ ಸುಳ್ಳು ಸುದ್ದಿಯನ್ನು ಶಾಲಾ ಮಕ್ಕಳ ಪರೀಕ್ಷೆಗೂ ಅಂಟಿಸಿದ ಕೋಣೆಮನೆ ಮತ್ತು ಸೂಲಿಬೆಲೆ

Most read

ರಾಜ್ಯ ಶಿಕ್ಷಣ ಮಂಡಳಿ ಜನವರಿ 31 ರಂದು ಬಿಡುಗಡೆ ಮಾಡಿದ SSLC ಪೂರ್ವ ಸಿದ್ದತ ಪರೀಕ್ಷೆಯ ವೇಳಪಟ್ಟಿಯನ್ನು ʼಮುಸ್ಲಿಮರಿಗೆ ನಮಾಜ್‌ ಮಾಡಲು ಸರ್ಕಾರ ಅನುಕೂಲ ಮಾಡಿಕೊಟ್ಟಿದೆʼ ಎಂದು ಬಿಜೆಪಿ ವಕ್ತಾರ ಹರಿಪ್ರಕಾಶ್‌ ಕೋಣೆಮನೆ ಮತ್ತು ಚಕ್ರವರ್ತಿ ಸೂಲಿಬೆಲೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಶಾಲಾ ಮಕ್ಕಳ ಪಠ್ಯಪುಸ್ತಕವಾಯಿತು ಈಗ ಅವರ ಪರೀಕ್ಷೆಯ ವಿಷಯದಲ್ಲೂ ಬಿಜೆಪಿ ರಾಜಕೀಯ ಮಾಡುವುದನ್ನು ತೋರಿಸಿಕೊಟ್ಟಿದೆ. ಅದರ ಭಾಗವಾಗಿಯೇ ವಿಸ್ತಾರ ಸುದ್ದಿ ಪೋರ್ಟಲ್‌ ಅಲ್ಲಿ “SSLC Exam: ಪರೀಕ್ಷೆಯಲ್ಲೂ ಮುಸ್ಲಿಮರ ಓಲೈಕೆ; ನಮಾಜ್‌ಗಾಗಿ ಸಮಯವೇ ಬದಲು!” ಎಂದು ದ್ವೇಷಕಾರುವ ಸುದ್ದಿಯನ್ನು ಪ್ರಕಟಿಸಿದ್ದು, ಇದನ್ನು ರಾಜ್ಯ ಬಿಜೆಪಿ ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಮರುಹಂಚಿಕೊಂಡು “ಪರೀಕ್ಷೆಯ ವಿಚಾರದಲ್ಲೂ ಒಂದು ಸಮುದಾಯಕ್ಕೆ ಇಷ್ಟೊಂದು ಓಲೈಕೆ ಮಾಡುವ ಕಾಂಗ್ರೆಸ್, ಹಿಂದೂ ವಿದ್ಯಾರ್ಥಿಗಳನ್ನು ಈಗ ಎರಡನೇ ದರ್ಜೆಗೆ ಇಳಿಸಿದೆ” ಎಂದು ಆರೋಪಿಸಿದೆ.

ಇನ್ನೂ, ಚಕ್ರವರ್ತಿ ಸೂಲಿಬೆಲೆ ಮಾಡುವ ಭಾಷಣಗಳು ಮುಸ್ಲಿಂ ದ್ವೇಷವನ್ನು ಪ್ರತಿನಿಧಿಸುತ್ತವೆ ಅಂತ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್ ಒಳಪಟ್ಟಿದ್ದಾರೆ. ಈಗ ಸೂಲಿಬೆಲೆ ಸಹ ‘ಕರ್ನಾಟಕ ರಾಜ್ಯದ 10ನೇ ತರಗತಿಯ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದೆ. ಬೆಳಗಿನ ಅವಧಿಯಲ್ಲಿ ಎಲ್ಲಾ ಪರೀಕ್ಷೆಗಳು ನಡೆಯುತ್ತವೆ. ಆದರೆ ಶುಕ್ರವಾರ. ಏಕೆ? ಓಹ್.. ನಮಾಜ್‌ಗೆ ಸಮಯ?ʼ ಎಂದು ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಬರೆದುಕೊಂಡಿದ್ದಾರೆ.

ಶಿಕ್ಷಣ ಮಂಡಳಿಯು ಫೆ.26ರಿಂದ ಮಾರ್ಚ್‌ 2ರವರೆಗೆ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ ಎಂದು ಹೇಳಿದೆ. ಇಷ್ಟು ದಿನದಲ್ಲಿ ಶುಕ್ರವಾರ ಹೊರತುಪಡಿಸಿ ಬಾಕಿ ಎಲ್ಲ ದಿನಗಳಲ್ಲೂ ಬೆಳಗ್ಗೆ 10.15 – 1.30ರವರೆಗೂ ವಿವಿಧ ವಿಷಯಗಳ ಪರೀಕ್ಷೆ ಸಮಯ ನಿಗದಿಯಾಗಿದೆ. ಆದರೆ, ಒಂದು ಶುಕ್ರವಾರ ಮಾತ್ರ ಮಧ್ಯಾಹ್ನ 2 ಗಂಟೆಯಿಂದ 5.15ವರೆಗೆ ಶಿಕ್ಷಣ ಇಲಾಖೆ ಸಮಯ ನಿಗದಿ ಮಾಡಿದೆ. ಇದನ್ನು ಬಿಜೆಪಿಯ ವಕ್ತಾರ ಕೋಣೆಮನೆ ಮತ್ತು ಸೂಲಿಬೆಲೆ ಜೊತೆಗೆ ಕನ್ನಡದ ಡಿಜಿಟಲ್‌ ಪೋರ್ಟಲ್‌ ವಿಸ್ತಾರ ಕೂಡ ಮುಸಲ್ಮಾನರನ್ನು ಓಲೈಸಲು ಕಾಂಗ್ರೆಸ್‌ ಸರ್ಕಾರ ಈ ರೀತಿಯ ಆದೇಶ ಮಾಡಿದೆ. ಶಿಕ್ಷಣ ಇಲಾಖೆಯ ಮೇಲೆ ಒತ್ತಡ ಹೇರಿ ಈ ನಿರ್ದೇಶನ ಹೊರಡಿಸಲಾಗಿದೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿತ್ತು.

ಆದರೆ, ವಾಸ್ತವದಲ್ಲಿ ಮಾರ್ಚ್ 1 ರ ಶುಕ್ರವಾರದಂದು ಪಿಯುಸಿ ಪರೀಕ್ಷೆಗಳು ಆರಂಭವಾಗುತ್ತಿದ್ದು, ಅದೇ ದಿನ ಪಿಯುಸಿಯ ಕನ್ನಡ ಮತ್ತು ಅರೇಬಿಕ್ ಪರೀಕ್ಷೆ ನಡೆಯಲಿದೆ. ಹಾಗಾಗಿ ಆ ದಿನದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮಧ್ಯಾಹ್ನ ನಡೆಸಲಾಗುತ್ತಿದೆ.

ಇದನ್ನು ಬಳಸಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಲು ಚಕ್ರವರ್ತಿ ಸೂಲಿಬೆಲೆ ಮತ್ತು ಬಿಜೆಪಿಯ ಐಟಿ ಸೆಲ್ ಶುಕ್ರವಾರದ ನಮಾಜ್ ಮಾಡಲು ಮುಸ್ಲಿಂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಈ ರೀತಿ ಮಾಡಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹರಡಿಸಿದ್ದರು.

ಈ ರೀತಿಯಲ್ಲಿ ಪೋಸ್ಟ್‌ ಮಾಡಿದ ಹರಿಪ್ರಕಾಶ್ ಕೋಣೆಮನೆ ಮತ್ತು ಸೂಲಿಬೆಲೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೇಳಿಬರುತ್ತಿದೆ.

ಪರೀಕ್ಷಾ ಕೇಂದ್ರಗಳ ಕೊರತೆ ಹಾಗೂ ಗೊಂದಲ ಉಂಟಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಂಡಿರುವುದಾಗಿ ರಾಜ್ಯ ಕಾಂಗ್ರೆಸ್‌ ಹೇಳಿದೆ. ಮತ್ತು ಕೋಣೆಮನೆ ಮತ್ತು ಸೂಲಿಬೆಲೆಯ ವಿರುದ್ಧ ರಾಜ್ಯಕಾಂಗ್ರೆಸ್‌ ಆಕ್ರೋಶಗೊಂಡಿದೆ. ಮತ್ತು ಇದರಲ್ಲಿ ಸುಳ್ಳು ಅಪಪ್ರಚಾರದ ಮೂಲಕ ಪ್ರಚೋದನೆಗೆ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿಗೆ ಕನಿಷ್ಠ ಮರ್ಯಾದೆ ಇಲ್ಲ ಎಂದು ಕಿಡಿಕಾರಿದೆ.

More articles

Latest article