ಮೋಜಿನ ಜೀವನಕ್ಕೆ ನಕಲಿ ನೋಟು ಮುದ್ರಿಸಿ ಪೊಲೀಸರ ಅತಿಥಿಯಾದ ಉದ್ಯಮಿ ಪುತ್ರ

ಬೆಂಗಳೂರು:  ಮೋಜಿನ ಜೀವನಕ್ಕಾಗಿ  ಹಣ ಹೊಂದಿಸಲು ಖೋಟಾ ನೋಟು ತಯಾರಿಸಿ ಜವಳಿ ಉದ್ಯಮಿಯೊಬ್ಬರ ಪುತ್ರ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕ್ರಿಷ್‌ ಮಾಲಿ (23) ಬಂಧಿತ ಆರೋಪಿ. ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಕ್ರಿಷ್‌ ಗೆ ಮೋಜಿನ ಜೀವನ ನಡೆಸುವ ಖಯಾಲಿ. ಪಾರ್ಟಿಗಳನ್ನು ಆಯೋಜಿಸುವುದು, ಪ್ರವಾಸ ಹೋಗುವ ಹುಚ್ಚು. ಈತನ ದುಂಧುವೆಚ್ಚಕ್ಕೆ ಹಣ ನೀಡುವುದನ್ನು ಪೋಷಕರು ನಿಲ್ಲಿಸಿಬಿಟ್ಟಿದ್ದರು.  ಹೇಗಾದರೂ ಸರಿ, ಹಣ ಸಂಪಾದನೆ ಮಾಲೇಬೇಕೆಂದು ಹೊರಟ ಈತನಿಗೆ ಹೊಳೆದಿದ್ದು ಖೋಟಾನೋಟು ತಯಾರಿ.  ಅದಕ್ಕಾಗಿ ಆತ ಪ್ರಿಂಟರ್ ಸ್ಕ್ಯಾನರ್ ಮತ್ತು ಪೇಪರ್‌ ಖರೀದಿಸಿದ್ದ.

ನಕಲಿ ನೋಟು ತಯಾರಿಕೆಗೆ ಆನ್‌ಲೈನ್ ಮೂಲಕ ಕಮರ್ಷಿಯಲ್ ಸ್ಟ್ರೀಟ್‌ ನ ಹೋಟೇಲ್ ಒಂದರಲ್ಲಿ ರೂಂ ಬುಕ್ ಮಾಡಿದ್ದ. ಅಲ್ಲಿ 500 ರೂ.ಮುಖಬೆಲೆಯ ನೋಟುಗಳನ್ನು ಪ್ರಿಂಟ್ ಮಾಡಿದ್ದಾನೆ. ಪ್ರಿಂಟ್ ವೇಳೆ ಹಾಳಾದ ನೋಟುಗಳನ್ನು ರೂಂ ನಲ್ಲಿದ್ದ ಕಸದ ಬುಟ್ಟಿಗೆ ಹಾಕಿದ್ದಾನೆ. ಜೂ.7 ರಂದು ರೂಂ ಖಾಲಿ ಮಾಡುವಾಗ 500 ರೂ. ಮುಖಬೆಲೆಯ 6 ನಕಲಿ ನೋಟುಗಳನ್ನು ಹೋಟೆಲ್‌  ಮ್ಯಾನೇಜರ್‌ಗೆ ನೀಡಿ ತೆರಳಿದ್ದಾನೆ.

ಹೋಟೇಲ್ ಮ್ಯಾನೇಜರ್ ಹಣವನ್ನು ಬ್ಯಾಂಕಿಗೆ ಕಟ್ಟಲು ಹೋದಾಗ 6 ನೋಟುಗಳು ಖೋಟಾ ನೋಟುಗಳೆಂದು ಬ್ಯಾಂಕ್‌ ಸಿಬ್ಬಂದಿ ಮರಳಿಸಿದ್ದಾರೆ. ಆಗ ಈ ನೋಟುಗಳನ್ನು ಯಾರು ಕೊಟ್ಟಿರಬಹುದು ಎಂದು ಯೋಚಿಸುತ್ತಿದ್ದಾಗ  ಹೋಟೇಲ್ ರೂಂ ಬಾಯ್ ಕಸದ ಬುಟ್ಟಿಯಲ್ಲಿದ್ದ ಖೋಟಾ ನೋಟಿನ ಚೂರುಗಳನ್ನು ತಂದು ಮ್ಯಾನೇಜರ್‌ ಗೆ ತೋರಿಸಿದ್ದಾನೆ.

ಆ ಕೊಠಡಿಯಲ್ಲಿ ಯಾರು ಉಳಿದುಕೊಂಡಿದ್ದರು ಎಂದು ಪರಿಶೀಲಿಸಿದಾಗ ಆನ್‌ ಲೈನ್‌ ಮೂಲಕ ಕ್ರಿಷ್‌ ಕಾಯ್ದಿರಿಸಿದ್ದು ಕಂಡು ಬಂದಿದೆ. ಅಲ್ಲಿ ಆತನ ಆಧಾರ್‌ಕಾರ್ಡ್ ಲಭ್ಯವಾಗಿದೆ. ಕೂಡಲೇ ಮ್ಯಾನೇಜರ್‌  ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಗೆ ದೂರು ನೀಡಿದ್ದಾರೆ.  ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಕ್ರಿಷ್‌ ನಕಲಿ ನೋಟುಗಳನ್ನು ಮುದ್ರಿಸಿ ಚಲಾವಣೆಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.

500 ರೂ. ಮುಖಬೆಲೆ ಎಷ್ಟು ನೋಟುಗಳನ್ನು ಮುದ್ರಿಸಲಾಗಿದೆ. ಆ ನೋಟುಗಳನ್ನು ಚಲಾವಣೆ ಮಾಡಲಾಗಿದೆ ಎಂಬ ಮಾಹಿತಿಯನು ಪೊಲೀಸರು ಕಲೆ ಹಾಕುತ್ತಿದ್ದಾರೆ.

More articles

Latest article

Most read