ಪ್ರಜಾಪ್ರತಿ ನಿಧಿ ಕಾಯ್ದೆ-1951ರ ಕಲಂ-77ರ ಪ್ರಕಾರ 2024ರ ಲೋಕಸಭಾ ಚುನಾವಣಾ ಅಭ್ಯರ್ಥಿಗಳು ಅಥವಾ ಅಭ್ಯರ್ಥಿಗಳು ನಿಗಧಿ ಪಡಿಸಿರುವ ಪ್ರತಿನಿಧಿಗಳು, ಚುನಾವಣಾ ವೆಚ್ಚವನ್ನು ಪ್ರತ್ಯೇಕವಾಗಿ ರಿಜಿಸ್ಟರ್‌ಗಳಲ್ಲಿ (A,B & C) ನಿರ್ವಹಿಸಿ, ಚುನಾವಣಾ ವೆಚ್ಚ ವೀಕ್ಷಕರಿಗೆ ಮತ್ತು ಸಹಾಯಕ ವೆಚ್ಚ ವೀಕ್ಷಕರಿಂದ ಕನಿಷ್ಠ 3 ಬಾರಿ ಪರಿಶೀಲನೆಗೆ ಒಳಪಡಿಸಿ ಸಹಿ ಪಡೆಯುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ.
ಆದ್ದರಿಂದ, ತಮಗೆ ಈ ಮೂಲಕ ತಿಳಿಯ ಪಡಿಸುವುದೇನೆಂದರೆ, ಚುನಾವಣಾ ವೆಚ್ಚದ ರಿಜಿಸ್ಟರ್‌ಗಳನ್ನು ಪರಿಶೀಲಿಸಲು ಈ ಕೆಳಕಂಡ ದಿನಾಂಕ, ಸಮಯ ಮತ್ತು ವಿಳಾಸದಲ್ಲಿ ತಪ್ಪದೇ ಹಾಜರಾಗತಕ್ಕದ್ದು ಹಾಗೂ ವೆಚ್ಚಕ್ಕೆ ಸಂಬಂಧಿಸಿದಂತೆ ವೋಚರ್/ಬಿಲ್ ಗಳೊಂದಿಗೆ, ಚುನಾವಣಾ ಮೀಸಲು ಖಾತೆಯ ಬ್ಯಾಂಕ್ ಪಾಸ್ ಪುಸ್ತಕವನ್ನು ನಿಗಧಿಪಡಿಸಿದ ಹಿಂದಿನ ದಿನಾಂಕಕ್ಕೆ ನವೀಕರಿಸಿಕೊಂಡು (Updated) ಪರಿಶೀಲನಾ ಸಮಯದಲ್ಲಿ ಹಾಜರು ಪಡಿಸುವುದು.
ದಿನಾಂಕ: 16.04.2024, 20.04.2024 ಹಾಗೂ 24.04.2024 ರಂದು ಮೂರು ದಿನಗಳ ಕಾಲ ಬೆಳಗ್ಗೆ 10.00 ರಿಂದ ಸಂಜೆ 5.00 ರವರೆಗೆ ಚುನಾವಣಾಧಿಕಾರಿಗಳು ಅವರ ಕಛೇರಿ, ದಕ್ಷಿಣ, ಕೊಠಡಿ ಸಂ. 01, ಎರಡನೇ ಮಹಡಿ, 9ನೇ ಮುಖ್ಯ ರಸ್ತೆ, 9ನೇ ಅಡ್ಡ ರಸ್ತೆ, ಜಯನಗರ 2ನೇ ಹಂತ, ಬೆಂಗಳೂರು – 560011 ಇಲ್ಲಿ ಅಭ್ಯರ್ಥಿಗಳ ವೆಚ್ಚ ತಪಾಸಣೆ ನಡೆಯಲಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯಾದ ಶ್ರೀಮತಿ ವಿನೋತ್ ಪ್ರಿಯಾ ರವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಪತ್ರಿಕಾ ಪ್ರಕಟಣೆಯ ಪ್ರತಿಯನ್ನು ಲಗತ್ತಿಸಿದೆ.