ಮಾಜಿ ಸಚಿವ, ಭೀಮಣ್ಣ ಖಂಡ್ರೆ ಅಂತ್ಯಕ್ರಿಯೆ; ಸಿಎಂ, ಡಿಸಿಎಂ ಸೇರಿ ಸಾವಿರಾರು ಮಂದಿ ಬಾಗಿ

Most read

ಭಾಲ್ಕಿ: ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಮಾಜಿ ಸಚಿವ, ಶತಾಯುಷಿ ಭೀಮಣ್ಣ ಖಂಡ್ರೆ ಅವರ ಅಂತ್ಯಕ್ರಿಯೆ ಇಂದು ನೆರವೇರಿತು. ಭಾಲ್ಕಿ ಪಟ್ಟಣದ ಹೊರವಲಯದ ತೋಟದಮನೆ ಶಾಂತಿಧಾಮದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ಜರುಗಿತು. ಪತ್ನಿ ದಿವಂಗತ ಲಕ್ಷ್ಮೀಬಾಯಿ ಅವರ ಸಮಾಧಿ ಪಕ್ಕದಲ್ಲಿಯೇ ಭೀಮಣ್ಣ ಅವರ ಅಂತ್ಯಕ್ರಿಯೆ ನೆರವೇರಿತು.

 ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಭೀಮಣ್ಣ ಖಂಡ್ರೆ ಅವರ ಪುತ್ರ ಈಶ್ವರ ಖಂಡ್ರೆ, ಕೆ.ಜೆ. ಜಾರ್ಜ್, ಎಚ್.ಕೆ. ಪಾಟೀಲ್, ಲಕ್ಷ್ಮೀ ಹೆಬ್ಬಾಳಕ‌ರ್, ಶರಣಪ್ರಕಾಶ ಪಾಟೀಲ್, ಸ್ವಾಮೀಜಿಗಳು ಸೇರಿದಂತೆ ಸಚಿವರು, ಶಾಸಕರು ಉಪಸ್ಥಿತರಿದ್ದರು.

ವಿಭೂತಿ, ಪತ್ರೆ, ಹೂ, ರುದ್ರಾಕ್ಷಿಗಳನ್ನು ಅರ್ಪಿಸಿ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಸಮಾಧಿ ಮಾಡಲಾಯಿತು. ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.

ಇದಕ್ಕೂ ಮುನ್ನ ಭಾಲ್ಕಿ ಪಟ್ಟಣದಲ್ಲಿ ಅಲಂಕರಿಸಿದ ವಾಹನದಲ್ಲಿ ಭೀಮಣ್ಣ ಖಂಡ್ರೆ ಅವರ ಪಾರ್ಥೀವ ಶರೀರದ ಮೆರವಣಿಗೆ ನಡೆಯಿತು. ಹಾದಿಯುದ್ದಕ್ಕೂ ಸಾವಿರಾರು ಸಾರ್ವಜನಿಕರು ನೆರೆದು ಗೌರವ ಸಲ್ಲಿಸಿದರು.

More articles

Latest article