ಮೈಸೂರಲ್ಲಿ ಮೋದಿಗೂ ಮೊದಲೇ ಸಿದ್ಧು ಭರ್ಜರಿ ಪ್ರಚಾರ

Most read

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮೈಸೂರಿನಲ್ಲಿ ರೋಡ್ ಶೋ ಪ್ರಚಾರಕ್ಕೆ ಆಗಮಿಸುವ ಎರಡು ದಿನ ಮುನ್ನವೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೈಸೂರು-ಚಾಮರಾಜನಗರಗಳಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ.

ಮೋದಿ ೧೪ ರಂದು ಮೈಸೂರಿಗೆ ಆಗಮಿಸುತ್ತಿದ್ದಾರೆ. ಮೋದಿ ಆಗಮನಕ್ಕೂ ಮುನ್ನ ಎರಡು ದಿನ ಮೈಸೂರು ಚಾಮರಾಜನಗರ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಅವರೇ ಪ್ರಚಾರ ನಡೆಸಲಿದ್ದಾರೆ. ಮೂರು ದಿನ ವಿಶ್ರಾಂತಿ ಬಳಿಕ ಮತ್ತೆ ಮತ್ತೆ ಪ್ರಚಾರ ಮುಂದುವರೆಸಲಿದ್ದಾರೆ. ನಾಳೆಯಿಂದ ಎರಡು ದಿನ ಮೈಸೂರು, ಚಾಮರಾಜನಗರ ಕ್ಷೇತ್ರಗಳಲ್ಲಿ ಸಿದ್ಧರಾಮಯ್ಯ ಅವರ ಪ್ರಚಾರ ಶುರುವಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ತೆ್ಗೆದುಕೊಂಡಿದ್ದು, ನಾಳೆ ಚಾಮರಾಜನಗರ ವ್ಯಾಪ್ತಿಯ ಕೊಳ್ಳೆಗಾಲ, ನಂಜನಗೂಡು, ಹೆಚ್ ಡಿ ಕೋಟೆ ಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಚಾಮರಾಜನಗರ ಜಿಲ್ಲೆ ಚುನಾವಣಾ ಪ್ರಚಾರ ಮುಗಿಸಿ ನಾಳೆ ರಾತ್ರಿ ಮೈಸೂರು ವಾಸ್ತವ್ಯ ಹೂಡಲಿದ್ದಾರೆ.

ಶನಿವಾರ ಇಡೀ ದಿನ ಮೈಸೂರು ಲೋಕಸಭಾ ವ್ಯಾಪ್ತಿಯಲ್ಲಿ ಪ್ರಚಾರ ಮಾಡಲಿದ್ದಾರೆ. ಕೃಷ್ಣರಾಜ, ಹುಣಸೂರು, ಪಿರಿಯಾಪಟ್ಟಣಗಳಲ್ಲಿ ಪ್ರಚಾರ ಮಾಡಲಿದ್ದು, ಮೈಸೂರು ಚಾಮರಾಜನಗರ ಚುನಾವಣಾ ಪ್ರಚಾರ ಮುಗಿಸಿ ಶನಿವಾರ ರಾತ್ರಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

More articles

Latest article