ದೇಶದ್ಯಾಂತ ಇ-ಕಾಮರ್ಸ್ ಹಬ್ ಸ್ಥಾಪನೆ: ನಿರ್ಮಲಾ‌ ಸೀತಾರಾಮನ್ ಘೋಷಣೆ

Most read

ಹೊಸದಿಲ್ಲಿ: ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ದೇಶದಲ್ಲಿ ಇ-ಕಾಮರ್ಸ್ ಹಬ್ ಸ್ಥಾಪಿಸಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

2024-25 ಸಾಲಿನ ಬಜೆಟ್ ಮಂಡಿಸಿದ ಅವರು MSME ಗಳಿಗೆ ಸಾಲ ಯೋಜನೆ ಪ್ರಕಟಿಸಿದರು. ಸಂಕಷ್ಟದ ಸಂದರ್ಭದಲ್ಲಿ MSME ಗಳಿಗೆ ಸಾಲ ನೀಡಲಾಗುವುದು ಎಂದು ಹೇಳಿದರು.

ಯುವಜನರಿಗೆ 500 ಕಂಪನಿಗಳಲ್ಲಿ ಇಂಟರ್ನ್ ಶಿಪ್ ವ್ಯವಸ್ಥೆ ಮಾಡಲಾಗುವುದು ಎಂದ ಅವರು, 1 ಕೋಟಿ ಯುವಕರಿಗೆ ಇಂಟರ್ನ್ ಶಿಪ್ ನೀಡುವ ಉದ್ದೇಶ ಹೊಂದಲಾಗಿದ್ದು 5 ವರ್ಷಗಳಲ್ಲಿ 1 ಕೋಟಿ ಯುವಕರಿಗೆ ತರಬೇತಿ ನೀಡಲಾಗುವುದು. ಕೇಂದ್ರ ಸರ್ಕಾರದಿಂದ ಮಾಸಿಕ 5000 ಸ್ಟೈಪೆಂಡ್ ನೀಡಲಾಗುವುದು ಎಂದರು.

5 ವರ್ಷದಲ್ಲಿ 20 ಲಕ್ಷ ಯುವಕರಿಗೆ ಕೌಶಲ್ಯಾಭಿವೃದ್ದಿ ತರಬೇತಿ ನೀಡಲಾಗುವುದು. ತರಬೇತಿ ಪಡೆದ ಯುವಕರಿಗೆ 7.5 ಲಕ್ಷ ಸಾಲ ಸೌಲಭ್ಯ ಒದಗಿಸಲಾಗುವುದು ಎಂದರು.

ದೇಶಾದ್ಯಂತ 104 ಕ್ವಾಲಿಟಿ ಟೆಸ್ಟಿಂಗ್ ಲ್ಯಾಬ್ ಸ್ಥಾಪನೆ ಮಾಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಅಡಿಯಲ್ಲಿ 1 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸಲಾಗುವುದು‌ 300 ಯುನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸಲಾಗುವುದು. ಮನೆಗಳ ಮೇಲೆ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸಲಾಗುವುದು ಎಂದರು.

ಬಿಹಾರದ ಐತಿಹಾಸಿಕ ದೇವಾಲಯಗಳಿಗೆ ಆರ್ಥಿಕ ನೆರವು ಘೋಷಿಸಲಾಗಿದ್ದು, ಗಯಾ, ಬೋಧ್ ಗಯಾ ಅಭಿವೃದ್ದಿಗೆ ಕೇಂದ್ರದಿಂದ ಅನುದಾನ ಒದಗಿಸಲಾಗುವುದು. ಕಾಶಿ ವಿಶ್ವನಾಥ ಕಾರಿಡಾರ್ ಮಾದರಿಯಲ್ಲಿ ಅಭಿವೃದ್ದಿ ಪಡಿಸಲಾಗುವುದು ಎಂದ ಅವರು, ಒಡಿಶಾ ದೇವಾಲಯಗಳ ಅಭಿವೃದ್ದಿಗೂ ಹಣಕಾಸು ನೆರವು ಘೋಷಿಸಿದರು.

More articles

Latest article