ಚಿತ್ರನಟ ದರ್ಶನ್ ಜಾಮೀನು ರದ್ದುಪಡಿಸಲು ಕ್ರಮ; ಅಗತ್ಯ ಸಾಕ್ಷ್ಯಗಳ ಸಂಗ್ರಹ

Most read

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ನಡೆದ ಸ್ಥಳದಲ್ಲಿ ಚಿತ್ರನಟ ದರ್ಶನ್ ಹಾಜರಿದ್ದ ಬಗ್ಗೆ ಫೋಟೋ ಸಾಕ್ಷ್ಯಗಳು ದೊರೆತಿದ್ದು ಅವರ ಜಾಮೀನು ರದ್ದುಪಡಿಸಲು ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ತಿಳಿಸಿದ್ದಾರೆ.  ಜೂನ್ 8ರಂದು ಹತ್ಯೆ ನಡೆದ ಸ್ಥಳದಲ್ಲಿ ದರ್ಶನ್ ಮತ್ತು ಇತರ ಆರೋಪಿಗಳ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡು ಹೈದಾರಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್ಎಲ್) ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಹತ್ಯೆ ನಡೆದ ಸ್ಥಳದಲ್ಲಿ ದರ್ಶನ್ ಇದ್ದ ಫೋಟೋಗಳು ಲಭ್ಯವಾಗಿವೆ. ರೇಣುಕಾಸ್ವಾಮಿ ಕೊಲೆಯಲ್ಲಿ  ದರ್ಶನ್ ಪಾತ್ರ ಇರುವುದು ಎದ್ದು ಕಾಣುತ್ತಿದೆ.  ಹೀಗಾಗಿ ದರ್ಶನ್‌ಗೆ ಮಂಜೂರು ಮಾಡಿರುವ ಜಾಮೀನು ರದ್ದು ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಪೊಲೀಸ್ ಇಲಾಖೆ ತೀರ್ಮಾನಿಸಿದೆ. ದರ್ಶನ್  ಜತೆಯಲ್ಲಿದ್ದ ಒಬ್ಬರು ರೇಣುಕಾಸ್ವಾಮಿ ಹತ್ಯೆಯ ವಿಡಿಯೊ ಮಾಡಿಕೊಂಡಿದ್ದರು. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಜಾಮೀನು ರದ್ದುಪಡಿಸುವಂತೆ ಕೋರಲು ನಿರ್ಧರಿಸಲಾಗಿದೆ.

ಬೆನ್ನು ನೋವಿಗೆ ಸಂಬಂಧಿಸಿದಂತೆ ದರ್ಶನ್ ಇನ್ನೂ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ಹಾಗೆಯೇ ಕಾಲ ಕಳೆಯುತ್ತಿದ್ದಾರೆ. ಅವರಿಗೆ ಶಸ್ತ ಚಿಕಿತ್ಸೆ ಅಗತ್ಯವಿಲ್ಲ ಎಂದು ಗೊತ್ತಾಗಿದೆ. ಆಪರೇಷನ್ ಮಾಡದಿದ್ದರೆ ಬೆನ್ನುಮೂಳೆ ಮುರಿದು ಹೋಗುತ್ತದೆ ಎಂದು ಹೇಳಿದ್ದರು. ಜಾಮೀನು ದೊರೆತು ವಾರಗಳು ಕಳೆದರೂ ಆಪರೇಷನ್ ಆಗಿಲ್ಲ. ಇವೆಲ್ಲವನ್ನೂ ನ್ಯಾಯಾಲಯದ ಗಮನಕ್ಕೆ ತರಲಾಗುವುದು. ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಲಯ ತೀರ್ಮಾನ ಕೊಡಬೇಕು ಎಂದು ಅವರು ಹೇಳಿದರು. ದೂರವಾಣಿ ಕರೆಗಳ ಮಾಹಿತಿ ಸಲ್ಲಿಕೆ ನಟ ದರ್ಶನ್ ಹಾಗೂ ಇತರೆ ಆರೋಪಿಗಳ ವಿರುದ್ಧ ಸುಮಾರು 1300 ಪುಟಗಳ ಹೆಚ್ಚುವರಿ ಆರೋಪ ಪಟ್ಟಿಯನ್ನು ನಗರದ 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಪೊಲೀಸರು ಆರೋಪಿಗಳು ಕೊಲೆಯಲ್ಲಿ ಭಾಗಿಯಾಗಿದ್ದಕ್ಕೆ ಡಿಜಿಟಲ್ ಸಾಕ್ಷ್ಯಾಧಾರಗಳು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಕರೆಗಳ ವಿವರ (ಸಿಡಿಆರ್) ಸೇರಿದಂತೆ ಹಲವು ದಾಖಲೆಗಳನ್ನು ನೀಡಿದ್ದಾರೆ.

ಹತ್ಯೆ ನಡೆದ ನಂತರ ಶೆಡ್ ನಿಂದ ಚಿತ್ರದುರ್ಗದ ಅನು ಕುಮಾರ್ ಮತ್ತು ಮತ್ತಿಬ್ಬರು ಹೊರಹೋಗಿದ್ದಾರೆ. ಇವರು ಆಚೆ ಹೋದ ಫೋಟೋಗಳನ್ನು ಸೆಕ್ಯುರಿಟಿ ಗಾರ್ಡ್ ಫೋಟೋ ತೆಗೆದಿದ್ದಾರೆ. ಎಫ್ ಎಸ್ ಎಲ್ ನಿಂದ ಫೋಟೋಗಳನ್ನು ಮರು ಸಂಗ್ರಹಿಸಲಾಗಿದೆ. ಜತೆಗೆ ಆರೋಪಿಗಳ ಮೊಬೈಲ್ ಕರೆಗಳ ಮಾಹಿತಿಗಳನ್ನು ಲಗತ್ತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈಗಾಗಲೇ ಈ ಪ್ರಕರಣದಲ್ಲಿ ಪೊಲೀಸರು ಬೆಂಗಳೂರಿನ 57ನೇ ಸಿಸಿಎಚ್‌ ನ್ಯಾಯಾಲಯಕ್ಕೆ  1,300 ಪುಟಗಳ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.  ದರ್ಶನ್‌ ಹಾಗೂ ಇತರರು ಕೊಲೆಯಲ್ಲಿ ಭಾಗಿಯಾಗಿದ್ದಕ್ಕೆ ಡಿಜಿಟಲ್‌ ಸಾಕ್ಷ್ಯಾಧಾರಗಳು, ಎಫ್‌ಎಸ್‌ಎಲ್‌ ವರದಿ ಹಾಗೂ ಕರೆಗಳ ವಿವರ (ಸಿಡಿಆರ್‌) ಸೇರಿದಂತೆ ಹಲವು ಪ್ರಮುಖ ದಾಖಲೆಗಳನ್ನು ಲಗತ್ತಿಸಲಾಗಿದೆ. ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನ.26ರಂದು ನಡೆಯಲಿದೆ.

More articles

Latest article