ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣ ಇರಲಿ: ಬಿ. ಆರ್. ಭಾಸ್ಕರ್ ಪ್ರಸಾದ್

Most read

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಾಕಷ್ಟು ಅಭಿವೃದ್ದಿಗೆ ಕೆಲಸ ಮಾಡುತ್ತಿರುವ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರನ್ನು ಅಹಿಂದ ಸಂಘಟನೆಗಳ ಒಕ್ಕೂಟದ ನಿಯೋಗ ಭೇಟಿ ಮಾಡಿ ಹಲವು ವಿಷಯಗಳನ್ನು ಚರ್ಚಿಸಿ ಮನವಿ ಸಲ್ಲಿಸಿದ್ದಾರೆ.

ವಿಧಾನಸೌಧದ ಕೊಠಡಿ 207 ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಭೇಟಿ ಮಾಡಿದ ಅಹಿಂದ ಸಂಘಟನೆಗಳ ಒಕ್ಕೂಟದ ನಿಯೋಗ, ಗ್ರಾಮೀಣ ಭಾಗದ ಬಡ ಹಿಂದುಳಿದ ವರ್ಗಗಳಿಗೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣದ ಅಗತ್ಯದ ಬಗ್ಗೆ ಎರಡು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.

ಬೆಂಗಳೂರು ನಗರದಲ್ಲಿ ಪರಭಾಷಿಕರಿಗೆ ಮತ್ತು ಕನ್ನಡ ಗೊತ್ತಿಲ್ಲದವರಿಗೆ ಕನ್ನಡ ಕಲಿಸಲು ಈಗಾಗಲೇ ವಿಶೇಷ ಯೋಜನೆ ರೂಪಿಸಿಕೊಂಡಿದ್ದು, ಪ್ರಾಧಿಕಾರದ ಮುಂದಿನ ನಡೆಗಳು ಮತ್ತು ಕೆಲಸಗಳ ಬಗ್ಗೆ ಅನೇಕ ಸಲಹೆಗಳನ್ನು ನಿಯೋಗ ನೀಡಿದೆ. ಪ್ರಾಧಿಕಾರ ಅನೇಕ ಯೋಜನೆಗಳು ಹಾಕಿಕೊಂಡಿದೆ ವಿಶೇಷವಾಗಿ, ಸರೋಜಿನಿ ಮಹಿಷಿ ವರದಿಯ ಪ್ರಮುಖ 14 ಅಂಶಗಳನ್ನು ಜಾರಿ ತರಲು ಇದೇ ಅಧಿವೇಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾತನಾಡಿದ ಪುರುಷೋತ್ತಮ ಬಿಳಿಮಲೆ ಅವರು, ನಾನೂ ಹೋರಾಟಗಾರ ನೀವು ಹೇಳುವುದು ಸರಿ ಇದೆ ನಾನು ಕನ್ನಡದ ಉಳಿವಿನ ಪರವೇ ವಿನಃ ನಮ್ಮ ಗ್ರಾಮೀಣ ಮಕ್ಕಳ ಇಂಗ್ಲೀಷ್ ಕಲಿಕೆ ವಿರುದ್ದ ಇಲ್ಲವೇ ಇಲ್ಲ ಎಂದು ಬಿಳಿಮಲೆ ತಿಳಿಸಿದರು.

ನಂತರ ಭಾಸ್ಕರ್ ಅವರು ಮಾತನಾಡಿ, ಖಂಡಿತವಾಗಿ ಕನ್ನಡದ ನೆಲಕ್ಕೆ ಬಿಳಿಮಲೆ ಅವರಿಂದ ಬಹು ನಿರೀಕ್ಷೆಗಳಂತೂ ಇದ್ದೇ ಇದೆ. ಒಳ್ಳೆ ಕೆಲಸಗಳಿಗೆ ನಮ್ಮ ಬೆಂಬಲ ಸದಾ ಇದ್ದೆ ಇದೆ. ಗ್ರಾಮೀಣ ಭಾಗದ ಬಡ ಹಿಂದುಳಿದ ವರ್ಗಗಳಿಗೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣ ಇರಲಿ ಎಂದು ಅಹಿಂದ ಸಂಘಟನೆಗಳ ಮನವರಿಕೆಗೆ ಸಹಮತ ನೀಡಿದ್ದಾರೆ. ಕನ್ನಡ ಶಾಲೆಗಳಲ್ಲಿ ಉತ್ತಮ ಕಟ್ಟಡಗಳು, ಗುಣಮಟ್ಟ ಶಿಕ್ಷಣದ ಜೊತೆಗೆ ಯೋಗ್ಯ ಬೋಧಕ ವರ್ಗಕ್ಕೆ ಕನ್ನಡಿಗರು ಹೋರಾಟ ಮಾಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಫಿಯಾ ಕಡಿಮೆ ಆಗಬೇಕು. ಸರ್ವರಿಗೂ ಗುಣಮಟ್ಟ ಶಿಕ್ಷಣ ಸಿಗುವಂತಾಗಬೇಕು ಎಂದು ಹೇಳಿದ್ದಾರೆ.

ಅಹಿಂದ ಸಂಘಟನೆಗಳ ಒಕ್ಕೂಟಕ್ಕೆ ವಿಶೇಷ ಸಮಯ ನಿಗದಿಪಡಿಸಿ ಚರ್ಚೆಗೆ ಅವಕಾಶ ಒದಗಿಸಿದ ಅಧ್ಯಕ್ಷರಿಗೆ ಧನ್ಯವಾದಗಳು ಹಾಗೂ ಭಾಷೆ ಆಡುಮಾತಾಗದೆ ಜೀವಭಾಷೆ ಆಗಬೇಕೇಂದು ಸಿದ್ದಾರ್ಥ ಆನಂದ ಮಾಲೂರು ತಿಳಿಸಿದರು. ಅಹಿಂದ ಸಂಘಟನೆಗಳ ಒಕ್ಕೂಟ ನಿಯೋಗದ ಬಿ. ಆರ್. ಭಾಸ್ಕರ್ ಪ್ರಸಾದ್ ಸೇರಿದಂತೆ ಮತ್ತಿತ್ತರ ಸದಸ್ಯರು ಉಪಸ್ಥಿತರಿದ್ದರು.

More articles

Latest article