ತುರ್ತು ಕಾಮಗಾರಿ: ಜೂನ್‌ 19 ರಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾವೇರಿ ನೀರು ಪೂರೈಕೆ ಇರಲ್ಲ

Most read

 ಬೆಂಗಳೂರು:ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುವ ಸಲುವಾಗಿ ದಿನಾಂಕ: 19,ಗುರುವಾರ ಬೆಳಿಗ್ಗೆ 6 ಗಂಟೆಯಿಂದ ದಿನಾಂಕ: 20,ಶುಕ್ರವಾರ ಬೆಳಿಗ್ಗೆ 6 ಗಂಟೆಯವರೆಗೆ ಒಟ್ಟು 24 ಗಂಟೆಗಳ ಕಾವೇರಿ ನೀರು ಸರಬರಾಜು ಯೋಜನೆಯ ಹಂತ-1 ರಿಂದ ಹಂತ – 5 ರ ಎಲ್ಲಾ ಜಲರೇಚಕ ಯಂತ್ರಾಗಾರಗಳನ್ನುನು ಸ್ಥಗಿತಗೊಳಿಸಲಾಗಿರುತ್ತದೆ. ಅಂದು ಇಡೀ ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ಇರುವುದಿಲ್ಲ.

ಈ ಹಿನ್ನಲೆಯಲ್ಲಿ, 24 ಗಂಟೆಗಳ ಕಾಲ ಕಾವೇರಿ ನೀರು ಸರಬರಾಜು ಯೋಜನೆಯ ಹಂತ-1 ರಿಂದ ಹಂತ-5ರವರೆಗಿನ ಜಲರೇಚಕ ಯಂತ್ರಾಗಾರಗಳನ್ನು ಸ್ಥಗಿತಗೊಳಿಸಲಾಗುವುದು. ಇದರಿಂದಾಗಿ ಬೃಹತ್ ಬೆಂಗಳೂರು ನಗರ ಪ್ರದೇಶದ ವ್ಯಾಪ್ತಿಯಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಬೆಂಗಳೂರಿನ ನಾಗರೀಕರಿಗೆ ಹಾಗೂ ವಾಣಿಜ್ಯ/ಕೈಗಾರಿಕಾ ಪ್ರದೇಶಗಳಿಗೆ ಮುಂಜಾಗ್ರತೆಯಾಗಿ ಅಗತ್ಯವಿರುವ ನೀರನ್ನು ಸಂಗ್ರಹಣೆ ಮಾಡಿಕೊಳ್ಳುವಂತೆ ಜಲ ಮಂಡಳಿ ಕೋರಿದೆ.

ಬೆಂಗಳೂರು ನಗರದ ಜನತೆಗೆ ಯಾವುದೇ ಅಡತಡೆಯಿಲ್ಲದೇ ನೀರನ್ನು ಸರಬರಾಜು ಮಾಡುವ ಸದುದ್ದೇಶದಿಂದ ಟಿ.ಕೆ. ಹಳ್ಳಿಯಲ್ಲಿ ಕಾವೇರಿ 5ನೇ ಹಂತದ ಕೊಳವೆ ಮಾರ್ಗಕ್ಕೆ ಹೊಸ 3000 ಮಿ.ಮೀ. ವ್ಯಾಸ ಕೊಳವೆ ಮಾರ್ಗದ ಜೋಡಣೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಸೂಚಿಸಿರುವ ವಿದ್ಯುತ್ ಸ್ಥಾವರಗಳ ವಾರ್ಷಿಕ ನಿರ್ವಹಣೆ, ತುರ್ತು ಕಾಮಗಾರಿ ಮತ್ತು ವಿವಿಧ ವಾರ್ಷಿಕ/ನಿಯಮಿತ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಬೇಕಾಗಿರುತ್ತದೆ ಎಂದು ಜಲ ಮಂಡಳಿ ತಿಳಿಸಿದೆ.

More articles

Latest article