ದುಬೈ ರಾಜಕುಮಾರಿ ಶೈಖಾ ಮಹ್ರಾ ಮೊಹಮ್ಮದ್ ರಶೆದ್ ಅಲ್ ಮಕ್ತೂಮ್ ಅವರು ತನ್ನ ಪತಿ ಶೇಖ್ ಮನ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮನಾ ಅಲ್ ಮಕ್ತೌಮ್‌ಗೆ ಇನ್ಸ್ಟಾಗ್ರಾಮ್ ಮೂಲಕ ಖುಲಾ (ಫಸ್ಕ್) ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಖುಲಾ ಪೋಸ್ಟ್ ಮಾಡಿರುವ ರಾಜಕುಮಾರಿ, ಪ್ರೀತಿಯ ಗಂಡ ನಿಮಗೆ ವಿಚ್ಚೇದನ ನೀಡಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಪೋಸ್ಟ್ ನಲ್ಲಿ ತನ್ನ ಪತಿ ದ್ರೋಹ ಮಾಡಿದ ಕಾರಣ ನೀಡಿ, “ಪ್ರೀತಿಯ ಗಂಡ, ನೀವು ಇತರ ಸಂಗಾತಿಯೊಂದಿಗೆ ನಿರತರಾಗಿರುವ ಹೊತ್ತಿನಲ್ಲಿ ನಾನು ಈ ಮೂಲಕ ನಿಮಗೆ ವಿಚ್ಛೇದನ ನೀಡುತ್ತಿದ್ದೇನೆ” ಎಂದು ಬರೆದ, ನಾನು ವಿಚ್ಛೇದನ ನೀಡುತ್ತಿದ್ದೇನೆ ಎಂದು ಮೂರು ಬಾರಿ ಬರೆದುಕೊಂಡಿದ್ದಾರೆ.
ಇಸ್ಲಾಮಿಕ್ ನಲ್ಲಿ ಪತಿಯು ಪತ್ನಿಗೆ ‘ತ್ರಿವಳಿ ತಲಾಖ್’ ಹೇಳಲು ಅವಕಾಶ ಇದ್ದು, ಮಹಿಳೆಯರು ‘ಖುಲಾ’ ಎಂಬ ನಿಯಮ ಪಾಲಿಸಬೇಕಾಗುತ್ತದೆ. ರಾಜಕುಮಾರಿ ತನ್ನ ಪತಿಗೆ ಇನ್‌ಸ್ಟಾಗ್ರಾಮ್ ಮೂಲಕ ತನ್ನ ಪತಿಗೆ ತ್ರಿವಳಿ ಖುಲಾ ಹೇಳಿ ವಿಚ್ಛೇದನ ಘೋಷಿಸಿದ್ದಾರೆ.
ರಾಜಕುಮಾರಿ ಶೇಖ್ ಮನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮನ ಅಲ್ ಮಕ್ತೌಮ್ ಅವರನ್ನು ಮೇ 2023 ರಲ್ಲಿ ಮದುವೆಯಾಗಿದ್ದರು. ಕಳೆದ ತಿಂಗಳು ಮಗುವಿನ ಜೊತೆ ಫೋಟೋ ಶೇರ್ ಮಾಡಿದ್ದ ಶೈಖಾ ಮಹ್ರಾ “ನಾವಿಬ್ಬರು ಮಾತ್ರ” ಎಂದು ಬರೆದುಕೊಂಡಿದ್ದರು. ಈಗ ವಿಚ್ಚೇದನ ಘೋಷಣೆ ಮಾಡಿದ್ದಾರೆ.