Saturday, July 27, 2024

ಅನಂತ ಕುಮಾರ್ ಹೆಗಡೆ ಡೈಲಾಗ್ಸ್ ಹೊಡೆದದ್ದು ಬಿಟ್ಟು ಏನಾದರೂ ಕೆಲಸ ಮಾಡಿದ್ದಿದೆಯಾ?

Most read

ಮಸೀದಿಯನ್ನು ಒಡೆಯಬೇಕು, ಎಲ್ಲಾ ಮಸೀದಿಗಳ ಕೆಳಗೆ ದೇವಸ್ಥಾನಗಳು ಇದ್ದಾವೆ ಎಂದು ಅವರಾಡಿರುವುದು ಕಾನೂನಿನ ಪ್ರಕಾರ ದ್ವೇಷ ಭಾಷಣ, ಅದರಿಂದ ಅವರು ಚುನಾವಣೆ ಗೆಲ್ಲುತ್ತಾರಾ ಸೋಲುತ್ತಾರಾ ಬೇರೆ ವಿಷಯ, ಆದರೆ ಸಮಾಜದ ಮೇಲೆ ಆಗುವ ದುಷ್ಪರಿಣಾಮವನ್ನು ಅವರು ಅರ್ಥ ಮಾಡಿಕೊಳ್ಳಬೇಕಾಗುತ್ತದೆಅಮೃತ್ ಶೆಣೈ

ಪ್ರಜಾಪ್ರಭುತ್ವದಲ್ಲಿ ಪೊಲೀಸ್ ಇದೆ,ನ್ಯಾಯಾಲಯ ‌ಇದೆ,ವ್ಯವಸ್ಥೆ ಇದೆ ಆದರೂ ಈ ಹೆಗಡೆ ಸದಾ ಹೊಡಿ ಬಡಿ‌ ಎಂಬ ಸಿನಿಮಾ ಮಾದರಿಯ ಡೈಲಾಗ್ಸ್ ಮಾತುಗಳನ್ನೇ ಆಡುವುದು,ಕಾರ್ಯಕರ್ತರಿಂದ ಸಿಳ್ಳೆ ಹೊಡೆಸಿಕೊಳ್ಳುವುದು ನೋಡಿದರೆ ಅವರು ಇನ್ನೂ ಸಾವಿರ ವರ್ಷಗಳ ಹಿಂದಿನ ವಿಷಯಗಳನ್ನು ನಿನ್ನೆ ಮೊನ್ನೆ ನಡೆದಂತೆ ಹೇಳಿ ಜನರನ್ನು ಕೆರಳಿಸಿ ಚುನಾವಣೆಯಲ್ಲಿ ಗೆಲ್ಲುವ ತಂತ್ರ ಹೊರತು‌‌ ಪಡಿಸಿ ಸಾಧನೆಯ ಆಧಾರದಲ್ಲಿ ಚುನಾವಣೆ ಎದುರಿಸಲು ಶಕ್ತಿ ಇಲ್ಲ ಎಂಬುದು ಸಾಬೀತಾಗಿದೆ

ರಾಮ‌ ಮಂದಿರದ ವಿಷಯವೂ ಸರ್ವೋಚ್ಚ ‌ನ್ಯಾಯಾಲಯದಲ್ಲಿ ಸುದೀರ್ಘ ವಾದ ಪ್ರತಿವಾದದ ಬಳಿಕ ಆದೇಶ‌ ಬಂದು ಸರಕಾರ ಮಂದಿರ ನಿರ್ಮಾಣ ಮಾಡುತ್ತಾ ಇದೆಯೇ ವಿನಹ ಬಿಜೆಪಿಯಾಗಲೀ ಹೆಗ್ಡೆ ಯಾಗಲೀ ಮಾಡುತ್ತಾ ಇರುವುದು ಅಲ್ಲ. ಅಲ್ಲಿಯೂ ಗಮನಿಸಬೇಕಾದ ಅಂಶ ಏನೆಂದರೆ ಹಿಂದೆ ಇದ್ದ ಕಟ್ಟಡ(ಬಾಬರಿ ಮಸೀದಿ) ಯನ್ನು ಧ್ವಂಸ‌ ಮಾಡಿದ್ದು ಅಪರಾಧ ಎಂದು ‌ನ್ಯಾಯಾಲಯ ಹೇಳಿದೆ. ಹಾಗಿರುವಾಗ ಇವರು ನ್ಯಾಯಾಲಯದ ಅಸ್ತಿತ್ವವನ್ನೇ ಒಪ್ಪಿಕೊಳ್ಳುವುದಿಲ್ಲವೋ ಹೇಗೆ ?

ಮಸೀದಿಯನ್ನು ಒಡೆಯಬೇಕು, ಎಲ್ಲಾ ಮಸೀದಿಗಳ ಕೆಳಗೆ ದೇವಸ್ಥಾನಗಳು ಇದ್ದಾವೆ ಎಂದು ಅವರಾಡಿರುವುದು ಕಾನೂನಿನ ಪ್ರಕಾರ ದ್ವೇಷ ಭಾಷಣ, ಅದರಿಂದ ಅವರು ಚುನಾವಣೆ ಗೆಲ್ಲುತ್ತಾರಾ ಸೋಲುತ್ತಾರಾ ಬೇರೆ ವಿಷಯ, ಆದರೆ ಸಮಾಜದ ಮೇಲೆ ಆಗುವ ದುಷ್ಪರಿಣಾಮವನ್ನು ಅವರು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಯಾವುದೋ ಕಾಲಘಟ್ಟದಲ್ಲಿ ಬಾಬರ ಮಾಡಿದ ಕೆಲಸಕ್ಕೆ ಇವತ್ತು ನಮಗೇನಾದರು ಕಷ್ಟ ಬಂದರೆ ಕೂಡಲೇ ಧಾವಿಸಿ ಬರುವ ನಮ್ಮ ನೆರೆಮನೆಯ ಮಹಮ್ಮದನನ್ನು ನಾವು ದ್ವೇಷಿಸಬೇಕೆಂಬ ಪ್ರಚೋದನೆ ಈ ಹೆಗ್ಡೆ ನೀಡುತ್ತಾ ಇದ್ದಾರೆ.

ಇವರೇನು ಸಮಸ್ತ ಹಿಂದುಗಳ ಮನಸಿನ ಮಾತನ್ನಾಡುವುದಲ್ಲ, ಹಿಂದುಗಳು ಎಲ್ಲರೂ ಸೇರಿ ಇವರಿಗೆ ಯಾವ ವಿಷಯದ ಗುತ್ತಿಗೆಯನ್ನೂ ನೀಡಿಲ್ಲ, ಇವರ ಮಾತುಗಳನ್ನ ಒಪ್ಪದ‌ ಹಿಂದೂಗಳೇ ಒಪ್ಪಿದವರಿಗಿಂತ ಜಾಸ್ತಿ ಇದ್ದಾರೆ.

ಸಾವಿರ ವರ್ಷಗಳ ಸೇಡು ತೀರಿಸಬೇಕಂತೆ, ಸಾವಿರ ವರ್ಷಗಳ ಹಿಂದೆ ಇವರನ್ನೂ ಸೇರಿಸಿ ಈಗ ಇದ್ದವರು ಯಾರೂ ಭೂಮಿಯ ಮೇಲೆ ಇರಲಿಲ್ಲ, ಇವರು ಯಾವ ಸೇಡು ಯಾರ ವಿರುದ್ಧ ತೀರಿಸುವುದು?

ಎಲ್ಲಾ ಮಸೀದಿ ಒಡೆಯಲು ಹೊರಟರೆ ಸರಕಾರ ಏನು ಕಣ್ಣು ಮುಚ್ಚಿ ಕೂರುತ್ತದಾ? ಸಂಸದ ಆದರೇನು ಕಾನೂನಿಗಿಂತ ಮೇಲಾ ಇವರು?

ದುರದೃಷ್ಟಕರ ಏನೆಂದರೆ ಇವರ ಮಾತನ್ನು ಕೇಳಿ ಮುಸಲ್ಮಾನರು ಎಲ್ಲರೂ ಹಾಳು ಎಂಬ ತೀರ್ಮಾನಕ್ಕೆ ಯುವಕರು ಬಂದು ಮಸೀದಿಗಳಿಗೆ ಕಲ್ಲು ಬಿಸಾಡಿ ಜೈಲು ಪಾಲಾಗುತ್ತಾರೆ.

ಪರೇಶ್ ಮೇಸ್ತಾ ಮರಣದ‌ ಬಗ್ಗೆ ಹೆಗ್ಡೆಯವರ ಆರ್ಭಟ ಸಿಬಿಐ ವರದಿ ಬಂದ ಕೂಡಲೇ ಮಾಯವಾಯಿತು.

ಹೆಗಡೆ ಯವರಿಗೆ ಉತ್ತರ ಕನ್ನಡದಲ್ಲಿ ತಾನು ಮಾಡಿದ ಒಂದೇ ಒಂದು ಸಾಧನೆ ಹೇಳಿಕೊಳ್ಳಲಿಕ್ಕೆ ಇಲ್ಲ,ಕೆಲಸ‌ ಮಾಡಿದರೆ‌‌‌ ತಾನೇ ಹೇಳಿಕೊಳ್ಳುವುದು.

ಕರ್ನಾಟಕ ಸರಕಾರ ತಕ್ಷಣ ಇಂತಹ ಉದ್ರೇಕಕಾರಿ ಭಾಷಣ‌ ಮಾಡಿದ್ದಕ್ಕೆ ಇವರನ್ನು‌ ಬಂಧಿಸಬೇಕು, ಹಾಗೂ ಯುವ ಜನರ ಭವಿಷ್ಯವನ್ನೂ,ಕಾನೂನು ಸುವ್ಯವಸ್ಥೆಯನ್ನೂ,ಸಾಮಾಜಿಕ ಸೌಹಾರ್ದತೆಯನ್ನೂ ಕಾಪಾಡಬೇಕು.

ಅಮೃತ್ ಶೆಣೈ , ರಾಜಕೀಯ ವಿಶ್ಲೇಷಕರು

More articles

Latest article