ಧರ್ಮಸ್ಥಳ: ಶವಗಳನ್ನು ಹೊರತೆಗೆಯುವ ಕೆಲಸಕ್ಕೆ ಸಹಾಯಕ ಆಯುಕ್ತೆ ಅಸಹಕಾರ?

Most read

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದಲ್ಲಿ ಹೂತಿರುವ ಶವಗಳನ್ನು ಹೊರತೆಗೆಯಲು ಪುತ್ತೂರು ಸಹಾಯಕ ಆಯುಕ್ತೆ (ಎಸಿ) ಸ್ಟೆಲ್ಲಾ ವರ್ಗೀಸ್ ಅವರು ಅಸಹಕಾರ ತೋರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇಂದು ಬೆಳಗ್ಗೆ 7.30 ರಿಂದ ಶವ ಹೊರತೆಗೆಯಲು ವಿಶೇಷ ತನಿಖಾ ತಂಡ (ಎಸ್ ಐ ಟಿ) ಸಿದ್ದತೆ ಮಾಡಿಕೊಂಡಿತ್ತು. ಈ ಸಂದರ್ಭದಲ್ಲಿ ಹಾಜರಿರುವಂತೆ ಅಸಿಸ್ಟೆಂಟ್ ಕಮೀಷನರ್ ಅವರಿಗೆ ಎಸ್‌ ಐಟಿ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು. ಸ್ಟೆಲ್ಲಾ ವರ್ಗೀಸ್ ಅವರು ಬೆಳಗ್ಗೆ 10.30ಕ್ಕೆ ಕಚೇರಿಗೆ ಆಗಮಿಸಿ ನಂತರ ಶವಗಳನ್ನು ಹೊರತೆಗೆಯುವ ಸ್ಥಳಕ್ಕೆ ಬರುವುದಾಗಿ ತಿಳಿಸಿದ್ದಿರು ಎಂದು ಮೂಲಗಳು ತಿಳಿಸಿವೆ.

ಇವರ ವರ್ತನೆಗೆ ಎಸ್‌ ಐಟಿ ಅಧಿಕಾರಿಗಳು ಬೇಸರಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಬೆಳಗ್ಗೆ ಶವಗಳನ್ನು ಹೊರತೆಗೆಯಲು ಎಸ್‌ ಐಟಿ ಅಧಿಕಾರಿಗಳು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.

ದೂರು ಕೊಟ್ಟ ಅನಾಮಿಕ ವ್ಯಕ್ತಿ  ಎಸ್‌ ಐಟಿ ಕಚೇರಿಗೆ ಆಗಮಿಸಿದ್ದಾರೆ.  ತನಿಖಾಧಿಕಾರಿ ಜಿತೇಂದ್ರ ದಯಾಮ್‌ ಅವರೂ ಉಪಸ್ಥಿತರಿದ್ದಾರೆ. ಎಸ್‌ ಐಟಿ ಸೂಚನೆಯಂತೆ ಗ್ರಾಮ ಪಂಚಾಯತಿ ಶವಗಳನ್ನು ಹೊರತೆಗೆಯಲು 12 ಮಂದಿಯನ್ನು ನಿಯೋಜಿಸಿದೆ.

More articles

Latest article