ಧರ್ಮಸ್ಥಳ ಪ್ರಕರಣ: ವಸಂತ ಗಿಳಿಯಾರ್‌ ವಿರುದ್ಧ ಎಫ್‌ಐಆರ್‌: ಕೇರಳದ ಯೂಟ್ಯೂಬರ್‌ ವಿಚಾರಣೆ

Most read

ಮಂಗಳೂರು: ದ್ವೇಷ ಹುಟ್ಟಿಸುವಂತಹ ಸುದ್ದಿ ಹಂಚಿಕೊಂಡಿದ್ದ ಆರೋಪದಡಿಯಲ್ಲಿ ಪತ್ರಕರ್ತ ವಸಂತ ಗಿಳಿಯಾರ್ ಫೇಸ್‌ ಬುಕ್‌ ಮತ್ತು  ಶ್ರೀಹರೀಶ್‌ ಪೂಂಜ ಫ್ಯಾನ್ಸ್‌ ಕ್ಲಬ್‌ ಕರ್ನಾಟಕ ಎಂಬ ಫೇಸ್‌ ಬುಕ್ ಖಾತೆಗಳ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಎಫ್‌ಐಆರ್‌ ದಾಖಲಾಗಿದೆ. 

ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಕೇರಳ ಮೂಲದ ಯೂಟ್ಯೂಬರ್‌ ಮುನಾಫ್‌, ಕರ್ನಾಟಕದ ‘ಯುನೈಟೆಡ್ ಮಿಡಿಯಾ’ ಯೂಟ್ಯೂಬ್‌ ಚಾನೆಲ್‌ ನ ಅಭಿಷೇಕ್ ಹಾಗೂ ಸೌಜನ್ಯ ಪರ ಹೋರಾಟಗಾರ ಗಿರೀಶ ಮಟ್ಟೆಣ್ಣವರ ಅವರ ವಿಚಾರಣೆ ನಡೆಸಿದೆ.

ಸಾಕ್ಷಿ ದೂರುದಾರ ಚಿನ್ನಯ್ಯನಿಗೆ ಉಳಿದುಕೊಳ್ಳಲು ಅವಕಾಶ ನೀಡಿದ್ದ ಜಯಂತ್ ಟಿ., ಚಿನ್ನಯ್ಯ ಎಸ್‌ಐಟಿಗೆ ಒಪ್ಪಿಸಿದ್ದ ಬುರುಡೆ ಇದ್ದ ಜಾಗವನ್ನು ತೋರಿಸಿದ್ದ ವಿಠಲ ಗೌಡ ಅವರ ವಿವಾರಣೆಯೂ ನಡೆದಿದೆ. ದಿನವಿಡೀ ಇವರನ್ನು ಬೆಳ್ತಂಗಡಿಯ ಎಸ್‌ ಐಟಿ ಕಚೇರಿಯಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿದರು.

ಕೇರಳದ ಯೂಟ್ಯೂಬರ್‌ ಮುನಾಫ್‌ ಹಾಗೂ ಕರ್ನಾಟಕದ ‘ಯುನೈಟೆಡ್ ಮಿಡಿಯಾ’ ಯೂಟ್ಯೂಬ್‌ ಚಾನೆಲ್‌ನ ಅಭಿಷೇಕ್ ಅವರು ನೇತ್ರಾವತಿ ನದಿ ಸಮೀಪದ ಅರಣ್ಯದಿಂದ ಬುರುಡೆ ಹೊರತೆಗೆದ ವಿಡಿಯೊ ಪ್ರಸಾರ ಮಾಡಿದ್ದರು.

More articles

Latest article